ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
- ಲೆಕ್ಕ ಕೊಡಿ ಎಂದು ಕೇಳ ಲೆಕ್ಕ ಕೇಳಲು ಇವರು ಯಾರು ?
- ಪ್ರಿಯಾಂಕ್ ಖರ್ಗೆಗೆ ವಿನಾಶ ಕಾಲೇ ವಿಪರೀತ ಬುದ್ಧಿ
- ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ
ಶಿವಮೊಗ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ಅಪಪ್ರಚಾರ ಮಾಡುವವರು ಖಂಡಿತ ನೆಲ ಕಚ್ಚಿ ಹೋಗುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ(Former DCM K.S.Eshwarappa)ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ(Home Minister Priyank Kharge) ಅವರು ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ. ಅದರ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಲೆಕ್ಕ ಕೇಳಲು ಇವರು ಯಾರು? ಆತ ಒಬ್ಬ ಅಯೋಗ್ಯ. ಪ್ರಚಾರಕ್ಕಾಗಿ ಏನೇನೋ ಬಡಬಡಿಸುತ್ತಿರುವ ಆತನಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್( RSS) ಅಡಿ ಸಾವಿರಾರು ಸಂಘ ಸಂಸ್ಥೆಗಳಿವೆ. ಸಂಘಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಮೇಲೆಯೇ ಏಕೆ ಕಣ್ಣು?, ಮುಸ್ಲಿಂ ಸಂಘಟನೆಗಳ ಬಗ್ಗೆ ಅವರೇಕೆ ಮಾತನಾಡುತ್ತಿಲ್ಲ ?, ಅವರು ಮಂತ್ರಿಯಾಗಿರಬಹುದು, ಅವರಿಗೆ ಕಾನೂನು ಗೊತ್ತಿದೆ ತಾನೇ? ಕಾನೂನು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಮಾತನಾಡುವುದು ಸರಿಯಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಆಗಲಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಆಗಲಿ, ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಆಗಲಿ, ಇಂದಿರಾ ಗಾಂಧಿ ಸೇರಿ ಯಾರೂ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಆಗಲಿಲ್ಲ. ಇವರೇನು ಮಾಡುತ್ತಾರೆ ಎಂದು ಪ್ರಶ್ನಿಸಿದರು.