ಸೊರಬ ಪಟ್ಟಣದ ರಂಗ ಮಂದಿರದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸಚಿವ ಮಧುಬಂಗಾರಪ್ಪ ವಿವಿಧ ಉಪಕರಣಗಳನ್ನು ವಿತರಿಸಿದರು. ಶಶಿಧರ್​, ಪ್ರಶಾಂತ್​ ಮೇಸಿ, ಜೈಶೀಲಗೌಡ ಮುಂತಾದವರಿದ್ದರು. 
ಶಿವಮೊಗ್ಗ

ಕಾರ್ಮಿಕರಿಗೆ ನೆಲೆ ಒದಗಿಸಲು ಚಿಂತನೆ

ಸೊರಬ: ಕಾರ್ಮಿಕ ವರ್ಗಕ್ಕೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಹೆಚ್ಚುವರಿ ಅನುದಾನ ನೀಡಲು ವಿಧಾನಸಭೆ ಅಧಿವೇಶನದಲ್ಲಿ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಬಳಿ ಚರ್ಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಾ ಪರಿಕರ, ಕೆಲಸ ಸಾಮಗ್ರಿ ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು.
ಸರ್ಕಾರಿ ಹಾಗೂ ಖಾಸಗಿ ಕಟ್ಟಡವನ್ನು ಅನುಕೂಲಕ್ಕೆ ತಕ್ಕಂತೆ ತಮ್ಮ ಜ್ಞಾನವನ್ನು ಉಪಯೋಗಿಸಿ ಉತ್ತಮವಾಗಿ ಕಟ್ಟುವ ಕಾರ್ಮಿಕರಿಗೆ ಸ್ವಂತ ನೆಲೆಯಿಲ್ಲ ಅನ್ನ್ನುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ನೀಡುತ್ತಿರುವ ಅನುದಾನ ಕಡಿಮೆ ಇದೆ. ಇದರಿಂದ ಉತ್ತಮ ಮನೆ ಕಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಕಾರ್ಮಿಕರು ಹಲವು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದು, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಚಿವರೊಂದಿಗೆ ಸಮಯ ದಿನಾಂಕ ನಿಗದಿಪಡಿಸಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ನಿವೃತ್ತಿ ಹೊಂದಿದ ಕಾರ್ಮಿಕರಿಗೆ 3 ಸಾವಿರ ಪಿಂಚಣಿ, 2ಲಕ್ಷ ಮೊತ್ತದ ವಿಮೆಯನ್ನು 8 ಲಕ್ಷ ರೂ.ಗೆ ಹೆಚ್ಚಿಸುವ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಶಿಲ್ಪಾ ಮಾತನಾಡಿ, ತಾಲೂಕಿನಲ್ಲಿ 11,120 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿವಾಹದ ಸಮಯದಲ್ಲಿ ಪ್ರೋತ್ಸಾಹ ಧನವನ್ನು ಇಲಾಖೆಯಿಂದ ನೀಡಲು ಅವಕಾಶವಿದೆ. ನಿರ್ಮಾಣ ಹಂತದಲ್ಲಿ ಕಾರ್ಮಿಕ ಮೃತಪಟ್ಟರೆ ಅವಲಂಬಿತ ಕುಟುಂಬಗಳಿಗೆ 2ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.
ಇಒ ಶಶಿಧರ್​, ಆಶ್ರಯ ಸಮಿತಿ ಅಧ್ಯ ಪ್ರಶಾಂತ್​ ಮೇಸಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯ ಜೈಶೀಲಗೌಡ, ಮುಖಂಡರಾದ ತಬಲಿ ಬಂಗಾರಪ್ಪ, ಎಚ್​.ಗಣಪತಿ ಹುಲ್ತಿಕೊಪ್ಪ, ಹಿರಿಯಣ್ಣ, ಅಣ್ಣಪ್ಪ ಹಾಲಟ್ಟ, ಸದಾನಂದಗೌಡ ಬಿಳಗಲಿ, ಬಸವೇಶ್ವರ, ರತ್ನಮ್ಮ, ಲ$್ಮಣ, ಅತಿಕ್​, ಚಿನ್ನಪ್ಪ, ನಾಗರಾಜ್​ ಚಿಕ್ಕಸವಿ, ಪಾಣಿ ಡಾಕಪ್ಪ, ಫಯಾಜ್​ ಅಹಮದ್​, ನಾಗರಾಜ್​, ಶಿವಪ್ಪ ನಡಹಳ್ಳಿ ಇತರರಿದ್ದರು.