ಆನವಟ್ಟಿ ಸಮೀಪದ ಎಣ್ಣೆಕೊಪ್ಪ& ಕಮನವಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ರಾವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಭಾರತಿ ಶೆಟ್ಟಿ, ರಾಜು ತಲ್ಲೂರು, ಎ.ಎಲ್.ಅರವಿಂದ್, ಗಜಾನನ ರಾವ್ ಮತ್ತಿತರರಿದ್ದರು.
ಆನವಟ್ಟಿ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಟಿಗಟ್ಟಲೆ ಅನುದಾನ ನೀಡಿದ್ದೇವೆ. ಈಗ ಲಗಳಲ್ಲಿ ಅನುದಾನ ಒದಗಿಸುತ್ತಿದ್ದೇವೆ. ಯಡಿಯೂರಪ್ಪ ಆಡಳಿತದ ಅವಧಿಯಲ್ಲಿ ಸೊರಬ ತಾಲೂಕಿನಲ್ಲಿ ಸಮುದಾಯಗಳಿಗೆ ನೀಡಿರುವ ಅನುದಾನದಲ್ಲಿ ಇನ್ನೂ ಶೇ.50ರಷ್ಟು ಬಳಕೆಯಾಗಿಲ್ಲ ಎಂದು ಸಂಸದ ಬಿ.ವೈ.ರಾವೇಂದ್ರ ಹೇಳಿದರು.
ಎಣ್ಣೆಕೊಪ್ಪ& ಕಮನವಳ್ಳಿ ಗ್ರಾಮದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಅನುದಾನದ 47 ಲ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಈಗಾಗಲೇ ಕೇಂದ್ರದ ಮನೆ&ಮನೆ ಗಂಗೆ ಯೋಜನೆಯಲ್ಲಿ ಬಹುತೇಕ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಶರಾವತಿ ನದಿ ಕುಡಿಯುವ ನೀರಿನ ಸಂಪರ್ಕವನ್ನು ಅದೇ ನಲ್ಲಿಗಳಿಗೆ ಕಲ್ಪಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಿದೆ. ಸೊರಬ ಹಾಗೂ ತೀರ್ಥಹಳ್ಳಿ ನಡುವೆ ರೈಲು ಸಂಪರ್ಕ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ ಎಂದರು.
ಎಂಎಲ್ಸಿ ಭಾರತಿ ಶೆಟ್ಟಿ ಮಾತನಾಡಿ, ಯುಡಿಯೂರಪ್ಪ ಅವರು ಅಧಿಕಾರ ದೊರೆಯುವ ಮೊದಲು ಸೊರಬವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದಿದ್ದರು. ನುಡಿದಂತೆಯೇ ಮೂಡಿ, ಮೂಗೂರು, ಕಚವಿ ಏತನೀರಾವರಿ ಉದ್ಘಾಟಿಸಿ ರೈತರಿಗೆ ಅನುಕೂಲ ಒದಗಿಸಿದ್ದಾರೆ ಎಂದರು.
ಮಡಿವಾಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯ ರಾಜು ತಲ್ಲೂರು, ಮುಖಂಡರಾದ ಎಚ್.ಇ ಜ್ಞಾನೇಶ್, ಎ.ಎಲ್.ಅರವಿಂದ್, ಗಜಾನನ ರಾವ್, ಹೊನ್ನಪ್ಪ, ರಾಜಶೇಖರ್ ಗಾಳಿಪುರ, ಗುರುಗೌಡ, ಪಾಣಿರಾಜಪ್ಪ, ಪ್ರಕಾಶ್, ಗೀತಾ ಮಲ್ಲಿಕಾರ್ಜುನ್, ಸುಧಾ ಶಿವಪ್ರಸಾದ್, ಹೊಳೆಯಮ್ಮ, ಮಂಜಪ್ಪ, ಬಸವರಾಜ್, ಲಿಂಗಮೂರ್ತಿ, ಮಂಜು ಬೊಳೇರ್ ಇತರರಿದ್ದರು..