ಸಾಗರದ ಎಲ್‌ಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿ.ಆರ್.ಜಯಂತ್, ಹರನಾಥ ರಾವ್, ಕವಲಗೋಡು ವೆಂಕಟೇಶ್, ಎಚ್.ಎಂ.ಶಿವಕುಮಾರ್ ಇತರರಿದ್ದರು. 
ಶಿವಮೊಗ್ಗ

ವಜ್ರ ಮಹೋತ್ಸವ ಆಚರಿಸಲು ಚಿಂತನೆ

ಸಾಗರ: ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಿಂದ ಪ್ರಸ್ತಕ ಸಾಲಿನಲ್ಲಿ ವಜ್ರ ಮಹೋತ್ಸವ jubilee ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದು  ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ College ಆಯೋಜಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ನಿಕಟಪೂರ್ವ ಅಧ್ಯಕ್ಷ ಹರನಾಥರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ವಜ್ರ ಮಹೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ. ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದರು.
LB College ಸಂಸ್ಥೆ ಉಪಾಧ್ಯಕ್ಷ ಕೆ.ಎಂ.ಸೂರ್ಯನಾರಾಯಣ, MDF ಪ್ರಮುಖರಾದ ಎಂ.ಹರನಾಥ ರಾವ್, ಕವಲಕೋಡು ವೆಂಕಟೇಶ್, ಡಾ. ಎಚ್.ಎಂ.ಶಿವಕುಮಾರ್, ಸತ್ಯನಾರಾಯಣ, ಪ್ರಕಾಶ್ ತಲಕಾಲಕೊಪ್ಪ, ಡಾ. ಎ.ಎಸ್.ಲಕ್ಷ್ಮೀಶ್, ಎಚ್.ಎಂ.ರವಿಕುಮಾರ್ ಇತರರಿದ್ದರು.