ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಮಕ್ಕಳಿಂದ ಪ್ರದರ್ಶನವಾದ ದ್ರುಪದ ಗರ್ವಭಂಗ ಮತ್ತು ಗುರುದಣೆ ಯಗಾನ ಪ್ರಸಂಗ.
- ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ
- ಧರ್ಮದರ್ಶಿ ರವೀಂದ್ರ ಭಟ್ ಅಭಿಮತ
- ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಮತ್ತೊಂದಿಲ್ಲ
ಶಿವಮೊಗ್ಗ: ಯಗಾನಕ್ಕೆ ಸರಿಸಾಟಿಯಾದ ಕಲೆ ಮತ್ತೊಂದಿಲ್ಲ ಎಂದು ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ರವೀಂದ್ರ ಭಟ್ ಹೇಳಿದರು.
ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಯಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಸಿಂಚನ&2026 ಉದ್ಘಾಟಿಸಿ ಮಾತನಾಡಿದ ಅವರು, ಯಗಾನ ಎಂಬ ನಾಲ್ಕು ಅರದ ಪದದಲ್ಲಿ ಹಾಡು, ಸಂಭಾಷಣೆ, ನೃತ್ಯ, ಅಭಿನಯ, ವೇಷಭೂಷಣ ಎಂಬ ಐದು ಅಂಶಗಳು ತುಂಬಿವೆ ಎಂದರು.
ಯಗುರು ಐನಬೈಲು ಶ್ರೀ ಪರಮೇಶ್ವರ ಹೆಗಡೆ ಮಾತನಾಡಿ, ಯಗಾನ ಯಾವುದೇ ಅಡೆತಡೆ ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಕಲೆಯಾಗಿದೆ. ತಾನು ಭಯದಿಂದ ಶಿವಮೊಗ್ಗಕ್ಕೆ ಬಂದಿದ್ದೆ. ಆದರೆ ಇಂದು ಯಗಾನ ಕಲಿಸುವ ಅವಕಾಶಗಳು ತುಂಬ ಬರುತ್ತಿವೆ ಎಂದರು.
ರೋಟರಿ ಸೆಂಟ್ರಲ್ ಶಿವಮೊಗ್ಗದ ಕಾರ್ಯದರ್ಶಿ ಜಯಶೀಲ ಶೆಟ್ಟಿ ಮಾತನಾಡಿ, ಯಗಾನ ಕಲೆಯನ್ನು ಬೆಳೆಸಲು ತನ್ನಿಂದಾದ ಸಹಾಯ ನೀಡುವ ಭರವಸೆ ನೀಡಿದರು. ಅನಾರೋಗ್ಯ ಪೀಡಿತ ಯಗಾನ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ ಮತ್ತು ಶಿವಮೊಗ್ಗ ವಿಕಾಸ ಶಾಲೆ ವಿದ್ಯಾರ್ಥಿ ಎಚ್.ಪ್ರಥಮ್ಗೆ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಯಿತು.
ಸಂಸ್ಥೆ ಅಧ್ಯ ಆನಂದ ಶೆಟ್ಟಿ ಮಾತನಾಡಿ, ಮುಂದಿನ ವರ್ಷದಿಂದ ಆಸಕ್ತರಿಗೆ ಉಚಿತ ಯಗಾನ ಕಲಿಸುವ ಯೋಜನೆ ಇದೆ ಎಂದರು. ಸಂಸ್ಥೆಯ ನಿರ್ದೇಶಕಿ ಭಾರತಿ ಸುದರ್ಶನ್, ಖಜಾಂಚಿ ಗೋವಿಂದರಾಯ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಸಹಕಾರ್ಯದರ್ಶಿ ಮಲ್ಲಿಕಾ ಆರ್ ಭಟ್ ಉಪಸ್ಥಿತರಿದ್ದರು.
ಮಕ್ಕಳ ಯಗಾನ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ಕುಮಾರ್ ಅಂಡಿಂಜೆ&ವಿನಯಾಕುಮಾರಿ ದಂಪತಿ ಹಾಗೂ ಶಿವಮೊಗ್ಗ ನಾರಾಯಣ ಹೃದಯಾಲಯದ ವೈದ್ಯ ಡಾ. ಶ್ರೀವತ್ಸ ನಾಡಿಗ್ ಮತ್ತು ಡಾ. ಅಪರ್ಣಾ ದಂಪತಿಯನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ದ್ರುಪದ ಗರ್ವಭಂಗ ಮತ್ತು ಗುರುದಣೆ ಯಗಾನ ಪ್ರಸಂಗದ ಪ್ರದರ್ಶನ, ಪುರುಷರು ಮತ್ತು ಮಹಿಳಾ ಕಲಾವಿದರಿಂದ ಶಮಂತಕ ಮಣಿ ವಿಲಾಸ ಮತ್ತು ವಿಂದಾನುವಿಂದ ಕಾಳಗ ಯಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಐನಬೈಲು ಪರಮೇಶ್ವರ ಹೆಗಡೆ, ಆರ್.ನಾಗರಾಜ, ಮದ್ದಳೆಯಲ್ಲಿ ಶರತ್ ಹೆಗ್ಗೋಡು, ಗಣಪತಿ ಪ್ರಭು, ಚೆಂಡೆಯಲ್ಲಿ ಕಿರಣ್ ಬಾವಿಗದ್ದೆ ಮತ್ತು ಎನ್.ಜೆ.ನವೀನ್ ಸಹಕರಿಸಿದರು.