ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ಅಮ್ಮನವರ ದೇವಸ್ಥಾನಲ್ಲಿ ಮಕ್ಕಳಿಂದ ದ್ರುಪದ ಗರ್ವಭಂಗ ಮತ್ತು ಗುರುದಕ್ಷಿಣೆ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. 
ಶಿವಮೊಗ್ಗ

ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಮತ್ತೊಂದಿಲ್ಲ । Yakshagana

ಪ್ರಮುಖ ಮುಖ್ಯಾಂಶಗಳು

  • ಸೋಮಿನಕೊಪ್ಪದಲ್ಲಿ 2 ದಿನಗಳ ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ
  • ಡಾ. ಸತೀಶ್ ಕುಮಾರ್ ಅಂಡಿಂಜೆ-ವಿನಯಾಕುಮಾರಿ, ಡಾ. ಶ್ರೀವತ್ಸ ನಾಡಿಗ್- ಡಾ. ಅಪರ್ಣಾ ದಂಪತಿಗೆ ಸನ್ಮಾನ
  • ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ರವೀಂದ್ರ ಭಟ್ ಹೇಳಿಕೆ
ಶಿವಮೊಗ್ಗ: ಯಕ್ಷಗಾನ(Yakshagana)ಕ್ಕೆ ಸರಿಸಾಟಿಯಾದ ಕಲೆ ಮತ್ತೊಂದಿಲ್ಲ ಎಂದು ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ರವೀಂದ್ರ ಭಟ್ ಹೇಳಿದರು.
ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಶನಿವಾರ ಎರಡು ದಿನಗಳ ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ(Yaksha sinchan)-2026 ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ಎಂಬ ನಾಲ್ಕು ಅಕ್ಷರದ ಪದದಲ್ಲಿ ಹಾಡು, ಸಂಭಾಷಣೆ, ನೃತ್ಯ, ಅಭಿನಯ, ವೇಷಭೂಷಣ(Costume) ಎಂಬ ಐದು ಅಂಶಗಳು ತುಂಬಿವೆ. ಇದು ಯಾವುದೇ ರಂಗಭೂಮಿ ಪ್ರಕಾರದಲ್ಲೂ ಇಲ್ಲ ಎಂದರು. 
ಯಕ್ಷಗುರು(Yaksha guru) ಐನಬೈಲು ಶ್ರೀ ಪರಮೇಶ್ವರ ಹೆಗಡೆ ಮಾತನಾಡಿ, ಯಕ್ಷಗಾನ ಯಾವುದೇ ಅಡೆತಡೆ ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಕಲೆಯಾಗಿದ್ದು, ತಾನು ಭಯದಿಂದ ಶಿವಮೊಗ್ಗಕ್ಕೆ ಬಂದಿದ್ದೆ. ಆದರೆ ಇಂದು ಪುರುಸೋತ್ತಿಲ್ಲದಷ್ಟು ಯಕ್ಷಗಾನ ಕಲಿಸುವ ಅವಕಾಶಗಳು ಬರುತ್ತಿವೆ ಎಂದರು.
ರೋಟರಿ ಸೆಂಟ್ರಲ್(Rotary Central) ಶಿವಮೊಗ್ಗದ ಕಾರ್ಯದರ್ಶಿ ಜಯಶೀಲ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಯನ್ನು ಬೆಳೆಸಲು ತನ್ನಿಂದಾದ ಸಹಾಯ ನೀಡುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆನಂದ ಶೆಟ್ಟಿ ಮಾತನಾಡಿ, ಮುಂದಿನ ವರ್ಷದಿಂದ ಆಸಕ್ತರಿಗೆ ಉಚಿತ ಯಕ್ಷಗಾನ ಕಲಿಸುವ ಯೋಜನೆ ಇದೆ ಎಂದರು. ಸಂಸ್ಥೆಯ ನಿರ್ದೇಶಕಿ ಭಾರತಿ ಸುದರ್ಶನ್, ಖಜಾಂಚಿ ಗೋವಿಂದರಾಯ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಸಹಕಾರ್ಯದರ್ಶಿ ಮಲ್ಲಿಕಾ ಆರ್ ಭಟ್ ಉಪಸ್ಥಿತರಿದ್ದರು.

ಡಾ. ಸತೀಶ್‌ಕುಮಾರ್ ದಂಪತಿಗೆ ಸನ್ಮಾನ

ಮಕ್ಕಳ ಯಕ್ಷಗಾನ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕುವೆಂಪು ವಿಶ್ವವಿದ್ಯಾಲಯ(Kuvempu University)ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಅಂಡಿಂಜೆ-ವಿನಯಾಕುಮಾರಿ ದಂಪತಿ ಹಾಗೂ ಶಿವಮೊಗ್ಗ ನಾರಾಯಣ ಹೃದಯಾಲಯ(Narayana Hrudayalaya)ದ ವೈದ್ಯ ಡಾ. ಶ್ರೀವತ್ಸ ನಾಡಿಗ್ ಮತ್ತು ಡಾ. ಅಪರ್ಣಾ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸತೀಶ್‌ಕುಮಾರ್ ಅಂಡಿಂಜೆ, ಮೊಬೈಲ್ ಪ್ರಭಾವದಿಂದ ದೂರವಿಡಲು ಪಾಲಕರು ಮಕ್ಕಳನ್ನು ಯಕ್ಷಗಾನದಂತಹ ಕಲೆಗಳಲ್ಲಿ ತೊಡಗಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರಿಗೆ ಕಲೆ, ಸಂಸ್ಕೃತಿಗಳನ್ನು ಕಲಿಸಿ ಸುಸಂಸ್ಕೃತರನ್ನಾಗಿ ಮಾಡಬೇಕೆಂದರು.

ಮಕ್ಕಳಿಂದ ದ್ರುಪದ ಗರ್ವಭಂಗ ಪ್ರದರ್ಶನ

ನಂತರ ಮಕ್ಕಳಿಂದ ದ್ರುಪದ ಗರ್ವಭಂಗ ಮತ್ತು ಗುರುದಕ್ಷಿಣೆ ಯಕ್ಷಗಾನ ಪ್ರಸಂಗದ ಪ್ರದರ್ಶನ, ಪುರುಷರು ಮತ್ತು ಮಹಿಳಾ ಕಲಾವಿದರಿಂದ ಶಮಂತಕಮಣಿ ವಿಲಾಸ ಮತ್ತು ವಿಂದಾನುವಿಂದ ಕಾಳಗ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗುರು ಐನಬೈಲಶ್ರೀ ಪರಮೇಶ್ವರ ಹೆಗಡೆ, ಆರ್.ನಾಗರಾಜ, ಮದ್ದಳೆಯಲ್ಲಿ ಶರತ್ ಹೆಗ್ಗೋಡು, ಗಣಪತಿ ಪ್ರಭು, ಚೆಂಡೆಯಲ್ಲಿ ಕಿರಣ್ ಬಾವಿಗದ್ದೆ ಮತ್ತು ಎನ್.ಜೆ.ನವೀನ್ ಸಹಕರಿಸಿದರು.