ಹೊಸನಗರ ತಾಲೂಕಿನ ನಗರದಲ್ಲಿ ಕಾಂಗ್ರೆಸ್​ ಆಯೋಜಿಸಿದ್ದ ಎಸ್​ಐಆರ್​ ಜಾಗೃತಿ ಕಾರ್ಯಾಗಾರದಲ್ಲಿ ಕಿಮ್ಮನೆ ರತ್ನಾಕರ್​ ಮಾತನಾಡಿದರು. ಕೆಸ್ತೂರು ಮಂಜುನಾಥ್​, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಇತರರಿದ್ದರು. 
ಶಿವಮೊಗ್ಗ

ಎಸ್​ಐಆರ್​ ಹಿಂದಿದೆ ಕೇಂದ್ರದ ದುರುದ್ದೇಶ

ಪ್ರಮುಖ ಮುಖ್ಯಾಂಶಗಳು

  • ಎಸ್​ಐಆರ್​ ಅರಿವು ಕಾರ್ಯಾಗಾರ
  • ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಆರೋಪ
  • ಎಸ್​ಐಆರ್​ ಹಿಂದಿದೆ ಕೇಂದ್ರದ ದುರುದ್ದೇಶ
ಹೊಸನಗರ: ಎಸ್​ಐಆರ್​ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ದುರುದ್ದೇಶ ಹೊಂದಿದ್ದು, ಒಂದು ತಿಂಗಳ ಸಮಯ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹೇಳಿದರು.
ತಾಲೂಕಿನ ನಗರ ಸೊಸೈಟಿ ಸಭಾಂಗಣದಲ್ಲಿ ಹೋಬಳಿ ಕಾಂಗ್ರೆಸ್​ ಟಕ ಆಯೋಜಿಸಿದ್ದ ಎಸ್​ಐಆರ್​ ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ಎಸ್​ಐಆರ್​ಗೆ 6 ತಿಂಗಳ ಕಾಲಾವಕಾಶ ನೀಡಬಹುದಿತ್ತು. ಅಲ್ಪ ಸಮಯದ ಆತುರ ಏನಿತ್ತು. ಈ ಚುನಾವಣೆ ಇಲ್ಲವೆಂದರೆ ಮುಂದಿನ ಚುನಾವಣೆಗೆ ಮತ ಪರಿಷ್ಕರಣೆ ಹೊಂದಿಕೆ ಆಗುತ್ತಿತ್ತು. ಅದರಿಂದ ದೊಡ್ಡ ನಷ್ಟ ಏನು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆದಿವಾಸಿಗಳು, ಗುಡ್ಡಗಾಡು ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಎಸ್​ಐಆರ್​ಗೆ ದಾಖಲೆ ಒದಗಿಸುವುದು ಸುಲಭವಲ್ಲ. ದಾಖಲೆ ಕೇಳುವುದು ತಪ್ಪಲ್ಲ. ಆದರೆ ಅರ ತಪ್ಪಿದೆ ಎಂದ ಮಾತ್ರಕ್ಕೆ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧ. ದೇಶದಲ್ಲಿ ಹುಟ್ಟಿ ಬೆಳೆದ ಜನರಿಗೆ ಕೇಂದ್ರ ಸರ್ಕಾರ ೂರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಮುಖರಾದ ಕೆಸ್ತೂರು ಮಂಜುನಾಥ್​, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ಅಂಬರೀಶ್​, ಗೋಪಾಲ ಶೆಟ್ಟಿ, ಕುಮಾರ ಹಿಲ್ಕುಂಜಿ ಇತರರಿದ್ದರು.