ಭದ್ರಾವತಿಯಲ್ಲಿ ನಗರ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ೂಷಣೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಜಿ.ಧರ್ಮಪ್ರಸಾದ್, ಮೋಹನ್, ರವಿ, ಹೇಮಂತ್, ಪವನ್, ಶರತ್, ಚೇತನ್, ಪ್ರೀತಮ್, ಸಮೀರ್ ಇತರರಿದ್ದರು.
- ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿಕೆ
- ಯುವಜನರ ಸಬಲೀಕರಣಕ್ಕೆ ಇವೆ ಹಲವು ಯೋಜನೆ
ಭದ್ರಾವತಿ: ಕೇಂದ್ರ ಸರ್ಕಾರ ಯುವ ಸಮುದಾಯವನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ನಗರ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ೂಷಣೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಮಾಜದ ಪ್ರತಿಯೊಬ್ಬ ಯುವಕರಿಗೂ ತಲುಪಿಸುವ ಜವಾಬ್ದಾರಿ ಯುವ ಮೋರ್ಚಾ ಕಾರ್ಯಕರ್ತರ ಮೇಲಿದೆ ಎಂದರು.
ಕೇಂದ್ರ ಸರ್ಕಾರವು ಯುವಕರು, ರೈತರು, ಮಹಿಳೆಯರು ಹಾಗೂ ಬಡವರ ಸಬಲೀಕರಣಕ್ಕಾಗಿ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಯುವಕರನ್ನು ಸ್ವಾವಲಂಬಿಗಳನ್ನಾಗಿ ಹಾಗೂ ಉದ್ಯೋಗ ಸೃಷ್ಟಿಕರ್ತರನ್ನಾಗಿ ರೂಪಿಸುವ ಉದ್ದೇಶದಿಂದ ಸ್ಕಿಲ್ ಇಂಡಿಯಾ, ಸ್ಟಾರ್ಟಪ್, ಮುದ್ರಾ ಯೋಜನೆ, ಕೌಶಲ್ಯ ವಿಕಾಸ್ ಯೋಜನೆ ಸೇರಿ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದರು.
ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದರ್ಶನ್ ಹಾಗೂ ನಗರ ಯುವ ಮೋರ್ಚಾ ಉಸ್ತುವಾರಿ ಸಂಜಯ್ ಮಾತನಾಡಿ, ನೂತನ ಪದಾಧಿಕಾರಿಗಳು ಪದ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಜತೆಗೆ ಸಂಟನೆ ಬಲವರ್ಧನೆ ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರುರಾವ್, ಚನ್ನೇಶ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರದಿಪ್ ಗೌಡರ್, ಮಂಡಲ ಕಾರ್ಯದರ್ಶಿ ಧನುಷ್ ಬೋಸ್ಲೆ ಮತ್ತಿತರರಿದ್ದರು.
ಯುವ ಮೋರ್ಚಾ ಉಪಾಧ್ಯರಾಗಿ ಮೋಹನ್, ರವಿ, ಹೇಮಂತ್, ಪವನ್, ಕಾರ್ಯದರ್ಶಿಗಳಾಗಿ ಶರತ್, ಚೇತನ್, ಪ್ರೀತಮ್, ಸಮೀರ್, ಕೋಶಾಧ್ಯರಾಗಿ ಪ್ರೀತಮ್ ಗೌಡ, ಕಾರ್ಯಕಾರಿಣಿ ಸದಸ್ಯರಾಗಿ ಮನು, ಚಂದ್ರಶೇಖರ್, ಪುಟ್ಟಣ್ಣ, ಹರ್ಷ, ಶರತ್, ಗೋಪಾಲ್, ಗಣೇಶ್, ಉಜ್ವಲ್, ಬಿ.ಎಚ್.ಮನೋಜ್, ಸುಹಾಸ್, ಸಾಗರ್, ಯಶು, ಮದನ್, ವಿನೀತ್, ವೆಂಕಟೇಶ್, ಲಿಖಿತ್ ಅವರಿಗೆ ಜವಾಬ್ದಾರಿಗಳನ್ನು ಅಧಿಕೃತವಾಗಿ ೂಷಿಸಲಾಯಿತು.