- ಬಿ.ಎಚ್.ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿರುವ ಕಳ್ಳರು
- ಅಡುಗೆ ಸಿಬ್ಬಂದಿ ಶಾಲೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ
- ಬೀಗ ಮುರಿದು 40 ಸಾವಿರ ರೂ. ಮೌಲ್ಯದ ಸಾಮಗ್ರಿ ಕಳವು
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿರುವ ಕಳ್ಳರು, ಅಕ್ಷರದಾಸೋಹ ಅಡುಗೆ ಕೋಣೆ( Akshardasahoha Kitchen)ಯ ಬೀಗ ಮುರಿದು 40 ಸಾವಿರ ರೂ. ಮೌಲ್ಯದ ಸಾಮಗ್ರಿ ಕಳವು(Theft)ಮಾಡಿದ್ದಾರೆ.
ಜೂ.27ರಂದು ಮಧ್ಯಾಹ್ನ ಶಾಲೆಯ ಕೆಲಸ ಮುಗಿದ ನಂತರ ಮುಖ್ಯ ಶಿಕ್ಷಕರು ಅಡುಗೆ ಕೋಣೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಜೂ.29ರ ಬೆಳಗ್ಗೆ ಅಡುಗೆ ಸಿಬ್ಬಂದಿ(Kitchen staff) ಶಾಲೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಅಡುಗೆ ಕೋಣೆಯ ಬಾಗಿಲಿನ ಚಿಲಕವನ್ನು ಆಯುಧದಿಂದ ಮುರಿದು ಒಳನುಗ್ಗಿ 12 ಸಾವಿರ ರೂ. ಮೌಲ್ಯದ 3 ಗ್ಯಾಸ್ ಸಿಲಿಂಡರ್(Gas cylinder), 6 ಸಾವಿರ ರೂ. ಮೌಲ್ಯದ ಒಂದು ಗ್ಯಾಸ್‌ಸ್ಟವ್(Gas stove), 6 ಸಾವಿರ ರೂ. ಮೌಲ್ಯದ 3 ದೊಡ್ಡ ಪಾತ್ರೆಗಳು, 8 ಸಾವಿರ ರೂ. ಮೌಲ್ಯದ 2 ಕುಕ್ಕರ್ ಹಾಗೂ 8 ಸಾವಿರ ರೂ. ಮೌಲ್ಯದ ಒಂದು ಮಿಕ್ಸಿಯನ್ನು ಕಳವು ಮಾಡಿದ್ದಾರೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ(incharge Head teacher) ಆರ್.ಕವಿತಾ ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.