ಭದ್ರಾವತಿಯ ನ್ಯೂಟೌನ್​ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಶುಕ್ರವಾರ ರಂಗ ಕಲಾವಿದರು ತಂಡದಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಡಿ.ರುದ್ರಯ್ಯ ಅವರನ್ನು ಸನ್ಮಾನಿಸಲಾಯಿತು. ಗಂಗಾನಾಯ್ಕ ಗೊಂದಿ, ಬಿ.ಎ. ಮಂಜುನಾಥ್​ ಇತರರಿದ್ದರು. 
ಶಿವಮೊಗ್ಗ

ರಂಗಕಲಾವಿದರಿಗೆ ಬದಲಾವಣೆ ಅಗತ್ಯ

ಟಿ.ಎಚ್.ಸಂತೋಷ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ
  • ಪತ್ರಕರ್ತರ ಸಂದ ಅಧ್ಯ ಗಂಗಾನಾಯ್ಕ ಗೊಂದಿ ಆಶಯ
  • ರಂಗಕಲಾವಿದರಿಗೆ ಬದಲಾವಣೆ ಅಗತ್ಯ
ಭದ್ರಾವತಿ: ರಂಗ ಚಟುವಟಿಕೆಗಳು ಣಿಸುತ್ತಿರುವ ಇಂದಿನ ದಿನಗಳಲ್ಲಿ ರಂಗ ಕಲಾವಿದರು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಗಂಗಾನಾಯ್ಕ ಗೊಂದಿ ಹೇಳಿದರು.
ಪಟ್ಟಣದ ನ್ಯೂಟೌನ್​ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಶುಕ್ರವಾರ ಕಾಗದನಗರದ ವಿಕಸಂ, ಲಲಿತ ಕಲಾ ಸಂ, ಶಾಂತಲಾ ಕಲಾ ವೇದಿಕೆ, ಮಿತ್ರ ಕಲಾ ಮಂಡಳಿ ಮತ್ತು ಅಪರಂಜಿ ಅಭಿನಯ ಶಾಲೆ, ನವೋದಯ ಕಲಾ ಸಂದ ಸಹಕಾರದೊಂದಿಗೆ ರಂಗ ಕಲಾವಿದರು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ೇತ್ರಗಳಲ್ಲೂ ಬದಲಾವಣೆಗಳಾಗುತ್ತಿವೆ. ಅಭಿನಯದ ಮೂಲ ನೆಲೆ ರಂಗಭೂಮಿಯಾಗಿದೆ. ರಂಗಭೂಮಿ ಮೂಲಕ ಗುರುತಿಸಿಕೊಂಡವರು ಉನ್ನತ ಸ್ಥಾನಕ್ಕೆ ಬೆಳೆದಿದ್ದಾರೆ. ಆದರೆ ಇಂದು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದರು.
ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಕಲಾವಿದರ ಹೋರಾಟಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ವಿಕಸಂ ಹಿರಿಯ ರಂಗಭೂಮಿ ಕಲಾವಿದ ಡಿ.ರುದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ರಂಗ ಕಲಾವಿದರು ತಂಡದ ಉಪಾಧ್ಯಕ್ಷ ಜಿ.ದಿವಾಕರ ಅಧ್ಯಕ್ಷತೆ ವಹಿಸಿದ್ದರು.
ಶಿವಮೊಗ್ಗ ಸಾಂಸತಿಕ ಕಲಾವಿದರ ಸಂದ ಅಧ್ಯಕ್ಷ ಬಿ.ಎ.ಮಂಜುನಾಥ್​, ರಂಗಭೂಮಿ ಕಲಾವಿದ ಜಿ.ರವಿಕುಮಾರ್​, ಶಿವಾನಂದ ಮೂರ್ತಿ, ವೈ.ಕೆ.ಹನುಮಂತಯ್ಯ ಫ್ರಾನ್ಸಿಸ್​, ಜಯಲ$್ಮ ರುದ್ರಯ್ಯ, ಕೆ.ಎಸ್​.ರವಿಕುಮಾರ್​, ಜಗದೀಶ್​, ಗಾಯಕ ಶಂಕರ್​ ಬಾಬು, ಕಮಲಕುಮಾರಿ ಇತರರಿದ್ದರು.