ಭದ್ರಾವತಿ ಶುಗರ್‌ಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪದಗ್ರಹಣ ಸಮಾರಂಭವನ್ನು ಡಾ. ಬಿರಾದಾರ್ ಉದ್ಘಾಟಿಸಿದರು. ನಾಗರಾಜ್, ಚನ್ನಪ್ಪ, ವೈ.ನಟರಾಜ್, ಫ್ರಾನ್ಸಿಸ್ ಇತರರಿದ್ದರು.
ಭದ್ರಾವತಿ: ಶುಗರ್‌ಟೌನ್ ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗಳ ಭಾಗವಾಗಿರುವ ನೇತ್ರ ತಪಾಸಣೆ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಲಯನ್ಸ್ ಪ್ರಥಮ ಉಪ ಜಿಲ್ಲಾ ರಾಜ್ಯಪಾಲ ಡಾ. ಬಿರಾದಾರ್ ಅಭಿಪ್ರಾಯಪಟ್ಟರು.
ನಗರದ ನ್ಯೂಟೌನ್‌ನಲ್ಲಿರುವ ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲು ನೂತನವಾಗಿ 317-ಎಚ್ ಪ್ರಾಂತ 3 ವಲಯ 2 ಎಂಬ ಜಿಲ್ಲೆ ರಚಿಸಿದೆ. ನಿರಂತರ ಸೇವಾ ಕಾರ್ಯ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಲಯನ್ಸ್ ಕ್ಲಬ್ ಸಾರ್ವಜನಿಕ ಸೇವಾ ಮನೋಭಾವದ ಸದಸ್ಯರನ್ನು ಹೊಂದಿರುವ ಸೇವಾಸಂಸ್ಥೆಯಾಗಿದೆ. ಸೇವೆ ಮಾಡುವವರಿಗೆ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದರು.
ಕ್ಲಬ್‌ಗೆ ಫ್ರಾನ್ಸಿಸ್, ವೈ.ನಟರಾಜ್, ಶಿವಾಜಿರಾವ್, ನಾಗೇಂದ್ರಪ್ಪ, ಕೆ.ಪಿ.ಗಿರೀಶ್, ಶಿವಕುಮಾರ್ ನೂತನ ಸದಸ್ಯರಾದರು.ಪ್ರಮುಖರಾದ ನಾಗರಾಜ್, ಡಾ. ಎಂ.ಸುರೇಶ್, ಶೇಖರಪ್ಪ, ಕೆ.ಪ್ರಶಾಂತ್, ತಮ್ಮೇಗೌಡ, ಡಾ. ಗುರುರಾಜ್ ಉಪಸ್ಥಿತರಿದ್ದರು.