ಸಾಗರದಲ್ಲಿ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸುವರ್ಣ ಮಹೋತ್ಸವದಲ್ಲಿ ಸೇವೆಯಿಂದ ನಿವೃತ್ತರಾದವರನ್ನು ಸನ್ಮಾನಿಸಲಾಯಿತು. ಮೈತ್ರಿ ಪಾಟೀಲ್, ಬಿ.ಎಲ್.ಶಿವಪ್ರಕಾಶ್, ಬಿ.ಪ್ರೇಮಾ ಇತರರಿದ್ದರು. 
ಶಿವಮೊಗ್ಗ

ಅಂಗನವಾಡಿ ನೌಕರರ ಕಾರ್ಯ ಶ್ಲಾಘನೀಯ

ಸಾಗರ: ಅಂಗನವಾಡಿ ನೌಕರರ ಕಾರ್ಯ ದೊಡ್ಡದು. ಸೇವೆಗೆ ತಕ್ಕ ಪ್ರತಿಫಲ ಸರ್ಕಾರದಿಂದ ಸಿಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗನವಾಡಿ ಮಕ್ಕಳಿಗೆ ಶುಚಿ, ರುಚಿಯಾದ ಆಹಾರ ನೀಡುವ ಜತೆಗೆ ಅಕ್ಷರಾಭ್ಯಾಸ ಮಾಡಿಸುವ ಉತ್ತಮ ಕೆಲಸ ನಿಮ್ಮದು. ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಗನವಾಡಿ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸರ್ಕಾರದ ವಿವಿಧ ಯೋಜನೆಗಳು ನಿಮ್ಮ ಮೂಲಕ ಯಶಸ್ವಿ ಅನುಷ್ಠಾನನಗೊಳ್ಳುತ್ತಿವೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ನಿಮ್ಮ ಸೇವಾನಿಷ್ಠೆ ಅನುಕರಣೀಯ ಎಂದರು.
ಸೇವೆಯಿಂದ ನಿವೃತ್ತರಾದ ಸಾವಿತ್ರಿ ಬೊಬ್ಬಿಗೆ ಮತ್ತು ರಿಹಾನ ಪರ್ವಿನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರ್ವಾಹಣಾಧಿಕಾರಿ ಬಿ.ಎಲ್.ಶಿವಪ್ರಕಾಶ್, ಸಂಘದ ಅಧ್ಯಕ್ಷೆ ಬಿ.ಪ್ರೇಮಾ, ಅಂಗನವಾಡಿ ಕಾರ್ಯಕರ್ತೆ ಎಂ.ಎಸ್.ರೇಣುಕಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಮಂಜಪ್ಪ, ಮಕ್ಕಳ ಸಂರಕ್ಷಣಾಧಿಕಾರಿ ಶಾರದಾ ಬಂಗೇರ, ಶಕುಂತಲಾ, ತ್ರಿವೇಣಿ, ವಿದ್ಯಾ, ಅನಸೂಯಾ, ಶೀಲಾ, ಚೇತನಾ, ರೂಪಾ ಇತರರಿದ್ದರು.