ಕಾಕನಹಸೂಡಿ ಗ್ರಮದ ದೊಡ್ಡಕೆರೆ ಬಳಿ ಗ್ರಾಮಸ್ಥರನ್ನು ಅಟ್ಟಿಸಿಕೊಂಡ ಬಂದ ಕಾಡಾನೆ. 
ಶಿವಮೊಗ್ಗ

ಗ್ರಾಮಸ್ಥರ ಅಟ್ಟಿಸಿಕೊಂಡು ಬಂದ ಕಾಡಾನೆ | kaadane daali

ಪ್ರಮುಖ ಮುಖ್ಯಾಂಶಗಳು

  • ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮತ್ತೆ ಶುರು
  • ಕಾಕನಹಸೂಡಿ ದೊಡ್ಡಕೆರೆ ಬಳಿ ಕಾಣಿಸಿಕೊಂಡ ಕಾಡಾನೆ
  • ಘೀಳಿಡುತ್ತಾ ಬಂದ ದೃಶ್ಯ ಮೊಬೈಲ್‌ನಲ್ಲಿ ಸೆರೆ
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಕಾಡಾನೆ(Kaadane)ಗಳ ಹಾವಳಿ ಮತ್ತೆ ಶುರುವಾಗಿದ್ದು, ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು(Umblebail) ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಕನಹಸೂಡಿ ಗ್ರಾಮದ ದೊಡ್ಡಕೆರೆ ಬಳಿ ಕಾಡಾನೆಯೊಂದು ಗ್ರಾಮಸ್ಥರನ್ನೇ ಅಟ್ಟಿಸಿಕೊಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕಾಕನಹಸೂಡಿ ಗ್ರಾಮದ ದೊಡ್ಡಕೆರೆ(Doddakere) ಸಮೀಪ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ದಾರಿಹೋಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳೀಯರು ಶಬ್ದ ಮಾಡುವ ಮೂಲಕ ಹಾಗೂ ಕೂಗಾಡಿ ಆನೆಯನ್ನು ಓಡಿಸಲು ಪ್ರಯತ್ನಿಸಿದರೂ ಕಿಂಚಿತ್ತೂ ಹೆದರದ ಕಾಡಾನೆ ಘೀಳಿಡುತ್ತಾ ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಬರುತ್ತಿದೆ. ಈ ದೃಶ್ಯವು ಸಾರ್ವಜನಿಕರ ಮೊಬೈಲ್‌(Mobile)ನಲ್ಲಿ ಸೆರೆಯಾಗಿದೆ. 
ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ(Forest dept)ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟಲು ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ ಎಂಬುದು ಉಂಬ್ಳೆಬೈಲು ಗ್ರಾಮಸ್ಥರ ಆರೋಪವಾಗಿದೆ.