ಕಿಮ್ಮನೆ ರತ್ನಾಕರ್​ 
ಶಿವಮೊಗ್ಗ

ಮತದಾನದ ಹಕ್ಕು ಕಸಿದುಕೊಳ್ಳುವುದೇ ವಿಶೇಷ ಪರಿಷ್ಕರಣೆ ಉದ್ದೇಶ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಟೀಕೆ
  • ಮತದಾನದ ಹಕ್ಕು ಕಸಿದುಕೊಳ್ಳುವುದೇ ವಿಶೇಷ ಪರಿಷ್ಕರಣೆ ಉದ್ದೇಶ
  • ಅನಕ್ಷರಸ್ಥರಷ್ಟೇ ಅಲ್ಲ ಸುಶಿಕ್ಷಿಕತರಿಗೂ ಎಸ್​ಐಆರ್​ ಮಾಹಿತಿಯಿಲ್ಲ
ತೀರ್ಥಹಳ್ಳಿ: ಈ ನೆಲದಲ್ಲಿ ಹುಟ್ಟಿದವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಉದ್ದೇಶ. ಬಿಜೆಪಿ ಸರ್ವಾಧಿಕಾರಿ ಧೋರಣೆಯ ತಂತ್ರಗಾರಿಕೆಯನ್ನು ರಾಜ್ಯದ ಮತದಾರರು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹೇಳಿದರು.
ಜಾತಿ, ಧರ್ಮದ ಭೇದವಿಲ್ಲದೆ ಈ ದೇಶದಲ್ಲಿ ಹುಟ್ಟಿದವರಿಗೆ ಮತ ಚಲಾಯಿಸುವ ಹಕ್ಕಿದೆ. ಜೂ.30ರಿಂದ ಆ.5ರೊಳಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸದವರಿಗೆ ಮತದಾನದ ಹಕ್ಕೇ ಇರುವುದಿಲ್ಲ. ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಾರೆ. ದಲಿತರು, ಅಲ್ಪಸಂಖ್ಯಾತರು, ಅನಕ್ಷರಸ್ಥರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದೇ ಬಿಜೆಪಿ ಉದ್ದೇಶ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ರಾಜಕೀಯ ತಂತ್ರಗಾರಿಕೆ ಹೂಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ ಆಗುವ ಅನಾಹುತದ ಬಗ್ಗೆ ಅನಕ್ಷರಸ್ಥರು ಮಾತ್ರವಲ್ಲದೆ ವಿದ್ಯಾವಂತರಿಗೂ ಸರಿಯಾದ ಮಾಹಿತಿ ಇಲ್ಲದ ಕಾರಣ ಮತದಾನದಿಂದ ವಂಚಿತರಾಗುವುದು ಖಚಿತ. ಆ.5ರೊಳಗೆ ಅರ್ಜಿ ಸಲ್ಲಿಸಬೇಕು ಅಥವಾ ಸಮೀೆಗಾಗಿ ಮನೆಗಳಿಗೆ ಬರುವ ಬಿಎಲ್​ಒಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಅವೈಜ್ಞಾನಿಕ ಪರಿಷ್ಕರಣೆ ಬಗ್ಗೆ ಸುಪ್ರೀಂ ಕೋರ್ಟ್​ ಕೂಡಾ ಒಪ್ಪಿಗೆ ನೀಡಿದ್ದು ಜನಜಾಗೃತಿಯೊಂದೇ ಪರಿಹಾರ ಮಾರ್ಗ ಎಂದು ಹೇಳಿದರು.
ದೇಶಪ್ರೇಮ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಆರ್​ಎಸ್​ಎಸ್​ನಲ್ಲಿ ಚುನಾವಣೆಯೇ ಇಲ್ಲ. ಈ ನೆಲದ ಕಾನೂನನ್ನೂ ಪಾಲಿಸದ, ನೂರು ವರ್ಷ ಇತಿಹಾಸ ಇರುವ ಆರ್​ಎಸ್​ಎಸ್​ನಲ್ಲಿ ಮಹಿಳೆಯರಿಗೆ ಆದ್ಯತೆಯೇ ಇಲ್ಲ. ಈವರೆಗೆ ನೋಂದಣಿಯನ್ನು ಯಾಕೆ ಮಾಡಿಲ್ಲ? ಈ ಬಗ್ಗೆ ಜನರು ತೀರ್ಮಾನಿಸಬೇಕು ಎಂದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನಾನು ಹೋರಾಟದ ಮೂಲಕವೇ ಜನರ ಪ್ರೀತಿಯಿಂದ ಎರಡು ಬಾರಿ ಈ ೇತ್ರದಲ್ಲಿ ಜಯಗಳಿಸಿದ್ದೇನೆ. ಅವಕಾಶಕ್ಕಾಗಿ ವಿಧಾನಸೌಧ ಸುತ್ತಿಲ್ಲ. ನಮ್ಮವರಿಂದಲೇ ಸೋತಿದ್ದೇನೆಯೇ ಹೊರತು ಪ್ರತಿಪಕ್ಷದವರಿಂದ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯೆ ಗೀತಾ ರಮೇಶ್​, ಸದಸ್ಯರಾದ ಶಬನಂ, ಮಂಜುಳಾ, ನಾಗೇಂದ್ರ ಹಾಗೂ ವಿಲಿಯಂ ಮಾರ್ಟಿಸ್​ ಇದ್ದರು.
ರಾಜಕೀಯ ಲಾಭದ ದುರುದ್ದೇಶ
ಈ ಮೊದಲೂ ಕೂಡಾ ದೇಶದಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆ ನಡೆದಿದೆ. ಮರಣ ಹೊಂದಿದವರು ಹಾಗೂ ಇತರೆ ಕಾರಣಗಳಿಗೆ ಅನಗತ್ಯವಾಗಿ ಉಳಿದಿರುವ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಸಲುವಾಗಿ ಪರಿಷ್ಕರಣೆ ಅಗತ್ಯ. ಇದಕ್ಕೆ ಅಗತ್ಯ ಸಮಯ ನೀಡದೆ ಬಿಜೆಪಿ ಜಾರಿಗೆ ತಂದಿರುವ ಎಸ್​ಐಆರ್​ ಉದ್ದೇಶ ಹಕ್ಕನ್ನು ಕಸಿದುಕೊಳ್ಳುವುದಾಗಿದೆ. ಈ ಪ್ರಯೋಗದಿಂದ ಈಚೆಗೆ ದೇಶದಲ್ಲಿ ನಡೆದಿರುವ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜಕೀಯ ಲಾಭ ಗಳಿಸಿದ್ದು, ಕರ್ನಾಟಕದಲ್ಲೂ ಈ ಪ್ರಯತ್ನ ಮುಂದುವರಿಸಿದೆ. ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್​ ಆರೋಪಿಸಿದರು.
ಮರಳು ದಂಧೆಯಲ್ಲಿ ಸ್ಥಳಿಯ ಶಾಸಕರಿಗೆ ಲಾಂತರ ರೂ. ಸಂದಾಯವಾಗಿರುವ ಬಗ್ಗೆ ಖಚಿತ ಮಾಹಿತಿ ಇದೆ. ಮೊತ್ತ ಕಡಿಮೆಯಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲಿ ಕನಿಷ್ಟ ಅರ್ಹತೆಯೂ ಇಲ್ಲದ ಮರಳು ಲೂಟಿಕೋರರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ.
> ಕಿಮ್ಮನೆ ರತ್ನಾಕರ್​, ಮಾಜಿ ಸಚಿವ