ಶಿಕಾರಿಪುರದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಅನಸೂಯಕ್ಕ, ಕೆ.ಎಸ್.ಗುರುಮೂರ್ತಿ, ಡಾ. ಶಿವಕುಮಾರ್ ಇತರರಿದ್ದರು.
ಶಿಕಾರಿಪುರ: ವಿದ್ಯಾವಂತರು, ವಿನಯವಂತರು, ಸದಾಚಾರ ಉಳ್ಳವರು ಸದ್ವಿಚಾರಗಳನ್ನು ಹಂಚುವವರಾಗಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಕುಮದ್ವತಿ ಶಿಣ ಸಂಸ್ಥೆ ಸಭಾಭವನದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ಮತ್ತು ಕುಮದ್ವತಿ ಶಿಣಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದ್ಗುಣಗಳನ್ನು ಕೂಡ ನುಂಗಿಹಾಕುವ ಶಕ್ತಿ ಮತ್ತು ಸಾಮರ್ಥ್ಯ ದುಶ್ಚಟಗಳಿಗಿದೆ. ತಾವು ವಿದ್ಯಾವಂತರು ಎಂದು ಹೇಳಿಕೊಳ್ಳುವ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಶಕ್ತಿ ಇಲ್ಲದೆ ಯಾವುದೇ ರಾಷ್ಟ್ರ ಸದೃಢವಾಗಲು ಸಾಧ್ಯವಿಲ್ಲ. ಯವಜನತೆಯಲ್ಲಿ ಸಚ್ಚಾರಿತ್ರ್ಯ ಇರಬೇಕು. ಬದುಕು ಕಟ್ಟಿಕೊಳ್ಳುವ ಜತೆಗೆ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳಿಗೆ ಅರ್ಥ ಬರಬೇಕೆಂದರೆ ಅದು ಸಚ್ಚಾರಿತ್ರ್ಯದಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಹಿತಾಸಕ್ತಿ ನಮ್ಮದಾಗಿರಬೇಕು ಎಂದರು.
ಇಂದು ವಿಶ್ವದಲ್ಲಿ ಭಯೋತ್ಪಾದನೆ ಎಂಬುದು ಧರ್ಮದಂತಾಗಿದೆ. ಇದರಿಂದ ಯುದ್ಧ, ಸಂರ್ಷಗಳು ಹೆಚ್ಚುತ್ತಿವೆ. ಭಾರತದಲ್ಲಿ ಹೊರಗಿನ ಶತ್ರುಗಳು ಇಲ್ಲಿನ ಯುವಕರನ್ನ ದೇಶದ ವಿರುದ್ಧ ಎತ್ತಿಕಟ್ಟುವ ಸತತ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಚಲಾವಣೆ ಆಗದ ಸಿದ್ಧಾಂತಗಳನ್ನು ಯುವಕರಿಗೆ ತಿಳಿಸಿ ದೇಶದ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ವಿದ್ಯಾರ್ಥಿಗಳು ಸತ್ಯಾಸತ್ಯತೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ಶಿವಮೊಗ್ಗದ ಸಂಟಕಿ ಅನಸೂಯಕ್ಕ ಮಾತನಾಡಿ, ಇಂದಿನ ಯುವಜನರು ಅತ್ಯಂತ ಬುದ್ಧಿವಂತರಿದ್ದರೂ ಕೂಡ ಅಷ್ಟೇ ದುರಾಭ್ಯಾಸ ಹೊಂದಿರುವುದು ಬೇಸರದ ಸಂಗತಿ. ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅತ್ಯದ್ಭುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎಂಎಡಿಬಿ ಮಾಜಿ ಅಧ್ಯ ಕೆ.ಎಸ್.ಗುರುಮೂರ್ತಿ, ವಿದ್ಯಾಸಂಸ್ಥೆ ಮುಖ್ಯಸ್ಥರಾದ ಡಾ. ಶಿವಕುಮಾರ್, ಶಿಕಾರಿಪುರ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ, ಕುಬೇರಪ್ಪ, ಡಾ. ವೀರೇಂದ್ರ ಇತರರಿದ್ದರು.