ಭದ್ರಾವತಿಯಲ್ಲಿ ಬಿಜೆಪಿ ತಾಲೂಕು ಮಹಿಳಾ ಮೋರ್ಚಾದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಅನ್ನಪೂರ್ಣಾ, ಸರಸ್ವತಿ, ಶಕುಂತಲಾ ಇತರರಿದ್ದರು. 
ಶಿವಮೊಗ್ಗ

ಮಹಿಳೆಯರ ಹಕ್ಕು ಕಸಿದುಕೊಂಡ ವಿಪಕ್ಷ

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರ ಹಕ್ಕು ಕಸಿದುಕೊಂಡ ವಿಪಕ್ಷ
  • ಬಿಜೆಪಿ ತಾಲೂಕು ಮಹಿಳಾ ಮೋರ್ಚಾದಿಂದ ಪ್ರತಿಭಟನೆ
  • ಮಾಧವಚಾರ್​ ವೃತ್ತದಿಂದ ರಂಗಪ್ಪ ವೃತ್ತದವರೆಗೆ ಮೆರವಣಿಗೆ
ಭದ್ರಾವತಿ: ನಾರಿ ಶಕ್ತಿ ಅಧಿನಿಯಮ ಮಸೂದೆ ತಿರಸ್ಕರಿಸಿ ಮಹಿಳೆಯರ ಹಕ್ಕನ್ನು ಕಾಂಗ್ರೆಸ್​ ಕಿತ್ತುಕೊಂಡಿದೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಮಹಿಳಾ ಮೋರ್ಚಾದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮಾಧವಚಾರ್​ ವೃತ್ತದಿಂದ ರಂಗಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಪದ ಜಿಲ್ಲಾ ಕಾರ್ಯದರ್ಶಿ ಸರಸ್ವತಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಹೆಣ್ಣನ್ನು ಕೀಳಾಗಿ ನೋಡಬೇಡಿ ಎಂದರು.
ಬಿಜೆಪಿ ಮಂಡಲ ಅಧ್ಯ ಜಿ.ಧರ್ಮಪ್ರಸಾದ್​, ಉಪಾಧ್ಯೆ ಸುಲೋಚನಾ ಪ್ರಕಾಶ್​, ಪ್ರಧಾನ ಕಾರ್ಯದರ್ಶಿ ಚನ್ನೇಶ್​, ರುರಾವ್​, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯಕ, ಗ್ರಾಮಾಂತರ ಮಂಡಲ ಅಧ್ಯ ತೀರ್ಥಯ್ಯ, ಮಹಿಳಾ ಮೋರ್ಚಾ ತಾಲೂಕು ಅಧ್ಯೆ ಅನ್ನಪೂರ್ಣಾ, ಶಕುಂತಲಾ ಇತರರಿದ್ದರು.