ಶಿಕಾರಿಪುರದಲ್ಲಿ ವೀರಶೈವ ಜಂಗಮ ಸಾಂಸತಿಕ ಭವನ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಬಿ.ವೈ. ವಿಜಯೇಂದ್ರ ನೆರವೇರಿಸಿದರು. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಕೆ.ಎಚ್.ಪುಟ್ಟಸ್ವಾಮಿ, ಕೆ.ಎಸ್.ಗುರುಮೂರ್ತಿ ಇತರರಿದ್ದರು.
ಶಿಕಾರಿಪುರ: ಜಂಗಮ ಸಮಾಜ ಸಾತ್ವಿಕತೆ, ಸದ್ವಿಚಾರ ಮತ್ತು ಈ ಮಣ್ಣಿನ ಸಂಸತಿ, ಸಂಸ್ಕಾರ ಹಂಚುವ ಸಮಾಜ ಎಂದು ಕಾಶಿ ಪೀಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕು ವೀರಶೈವ ಜಂಗಮ ಜನಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ವೀರಶೈವ ಜಂಗಮ ಸಾಂಸತಿಕ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಜಂಗಮರು ಎಂದರೆ ಸದಾ ಸಮಾಜೋನ್ನತಿಗೆ ಪೂರಕವಾಗಿ ಬದುಕು ನಡೆಸುವವರು. ವೇದ, ಮಂತ್ರ, ಜಪ&ತಪಗಳ ಜತೆಗೆ ಭಗವಂತನ ಆರಾಧನೆ ಮಾಡುವವರು. ಜಂಗಮರ ಜೋಳಿಗೆ ಎಂದರೆ ಅದು ಜಗದೋದ್ಧಾರದ ಜೋಳಿಗೆ ಎಂದರು.
ಇವತ್ತು ನಾವು ನೋಡುತ್ತಿರುವ ಬಹುತೇಕ ವೀರಶೈವ ಮಠಾಧೀಶರು ಈ ಜಂಗಮರ ಮನೆಯಿಂದ ಬಂದವರು. ಸಮಾಜವನ್ನು ಉದ್ಧಾರದ ಹೆದ್ದಾರಿಯಲ್ಲಿ ನಡೆಸಲು ಮಠಗಳಿಗೆ ಗುರುಗಳನ್ನು ನೀಡುವ ಪುಣ್ಯದ ಮನೆಗಳಿವು. ಇಂದಿಗೂ ಈ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದರೂ ಸಾಮಾಜಿಕವಾಗಿ ಗುರುಮನೆಯಾಗಿ ತನ್ನನ್ನು ಗುರುತಿಸಿಕೊಂಡಿದೆ ಎಂದು ಹೇಳಿದರು.
ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ವೈ.ವಿಜಯೇಂದ್ರ, ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ, ಚನ್ನವಿರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಅಭಿನವ ಮಹಂತ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ದಿಂಡದಹಳ್ಳಿ ಪಶುಪತಿನಾಥ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿಯ ರೇವಣಸಿದ್ದೇಶ್ವರ ಸ್ವಾಮೀಜಿ, ಶಿವಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ವೀರಶೈವ ಜಂಗಮ ಜನಕಲ್ಯಾಣ ಟ್ರಸ್ಟ್ ಅಧ್ಯ ಕೆ.ಎಚ್.ಪುಟ್ಟಸ್ವಾಮಿ ಇತರರಿದ್ದರು.