ಶಿವಮೊಗ್ಗ ಏರ್‌ಪೋರ್ಟ್‌ 
ಶಿವಮೊಗ್ಗ

ಶಿವಮೊಗ್ಗದಲ್ಲಿ 21ಕ್ಕೆ ಲೋಹದ ಹಕ್ಕಿಗಳ ಕಲರವ ಸ್ತಬ್ಧ

ಶಿವಮೊಗ್ಗ: ಬಹು ನಿರೀಕ್ಷೆಯೊಂದಿಗೆ ಮೂರು ವರ್ಷಗಳ ಹಿಂದೆ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಆರಂಭವಾಗಿದ್ದ ವಿಮಾನಗಳ ಸಂಚಾರ ಇದೇ ತಿಂಗಳ 21ಕ್ಕೆ ಸ್ಥಗಿತವಾಗಲಿದೆ. ಪ್ರಸ್ತುತ ಈ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಏರ್‌ಲೈನ್ ತನ್ನ ಸೇವೆಯನ್ನು ನಿಲ್ಲಿಸಲಿದೆ.

ಶಿವಮೊಗ್ಗ: ಬಹು ನಿರೀಕ್ಷೆಯೊಂದಿಗೆ ಮೂರು ವರ್ಷಗಳ ಹಿಂದೆ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಆರಂಭವಾಗಿದ್ದ ವಿಮಾನಗಳ ಸಂಚಾರ ಇದೇ ತಿಂಗಳ 21ಕ್ಕೆ ಸ್ಥಗಿತವಾಗಲಿದೆ. ಪ್ರಸ್ತುತ ಈ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಏರ್‌ಲೈನ್ ತನ್ನ ಸೇವೆಯನ್ನು ನಿಲ್ಲಿಸಲಿದೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಒಪ್ಪಂದ ಮುಕ್ತಾಯವಾಗಿದೆ. ಜತೆಗೆ ರಾಜ್ಯ ಸರ್ಕಾರ ವಿಜಿಎಫ್ (ವಯಾಬಿಲಿಟಿ ಗ್ಯಾಪ್ ಫಂಡಿಂಗ್) ಕೂಡಾ ಬಿಡುಗಡೆ ಮಾಡಿಲ್ಲ. ಹಾಗೆಯೇ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ವಿಮಾನ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಲೋಹದ ಹಕ್ಕಿಗಳ ಕಲರವ ಸದ್ಯಕ್ಕೆ ಕೊನೆಗೊಳ್ಳಲಿದೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ್, ಮಂದಿನ 3-4 ತಿಂಗಳಲ್ಲಿ ಮತ್ತೆ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಸೇವೆ ಆರಂಭಿಸಲು ಸತತ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ಒದಗಿಸಲು ಮಾಡಿಕೊಂಡಿದ್ದ 3 ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಶಿವಮೊಗ್ಗ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮುಂತಾದೆಡೆ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವೆಡೆ ಪೂರ್ಣ ಸ್ಥಗಿತವಾಗಿದ್ದು, ಒಪ್ಪಂದ ಮುಂದುವರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಿಜಿಎಫ್ ಸೌಲಭ್ಯವೂ ಮುಕ್ತಾಯ ಆಗುತ್ತಿರುವುದರಿಂದ, ಏರ್‌ಲೈನ್ ಆಪರೇಟರ್ 2026ರ ನ.21ರಿಂದ ಈ ಸೇವೆಗಳನ್ನು ನಿಲ್ಲಿಸಲು ಪ್ರಸ್ತಾಪಿಸಿದೆ. ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣವು ನಿಗದಿತ ವಾಣಿಜ್ಯ ವಿಮಾನ ಸಂಚಾರವಿಲ್ಲದೆ ಹಿಂದುಳಿದ ವಿಮಾನ ನಿಲ್ದಾಣ ಎಂಬ ಪಟ್ಟಿಗೆ ಸೇರುವ ಆತಂಕವಿದೆ ಎಂದು ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಮಲೆನಾಡು ಹಾಗೂ ಮಧ್ಯ ಕರ್ನಾಟಕ ಜಿಲ್ಲೆಗಳ ಆರ್ಥಿಕ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ವಿಮಾನ ಸಂಪರ್ಕ ಅಗತ್ಯ. ಮಾರ್ಪಡಿಸಿದ ಆರ್‌ಸಿಎಸ್-ಉಡಾನ್ 6.0 ಯೋಜನೆಯಡಿ ಶಿವಮೊಗ್ಗ ನಿಲ್ದಾಣದಿಂದ ಪ್ರಸ್ತಾಪಿಸಿರುವ 13 ಹೊಸ ಮಾರ್ಗಗಳನ್ನು ವಿಶೇಷವಾಗಿ ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೋರಲಾಗಿದೆ ಎಂದು ನಂಜಯ್ಯನಮಠ್ ತಿಳಿಸಿದರು.

ವಿಮಾನಯಾನ ಸೇವೆ ಮುಂದುವರಿಸಲು ಮತ್ತು ಒಪ್ಪಂದದ ಅವಧಿ ವಿಸ್ತರಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಶೇ.80 ಹಾಗೂ ರಾಜ್ಯ ಸರ್ಕಾರದ ಶೇ.20 ಪಾಲುದಾರಿಕೆ ಇರುವ ಕಾರಣ ಕೇಂದ್ರದ ಅನುಮತಿಗಾಗಿ ಎದುರು ನೋಡಲಾಗುತ್ತಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೂಡಾ ವಿಮಾನ ಹಾರಾಟ ಮುದುವರಿಸುವ ನಿಟ್ಟಿನಲ್ಲಿ ಸಾಕಷ್ಟು ಆಸಕ್ತಿ ತೋರಿದ್ದಾರೆ ಎಂದರು.