ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ.ಅವಿನಾಶ್ ಜಿಲ್ಲಾಮಟ್ಟದ ಯುವ ಸಂಸತ್ ಉದ್ಘಾಟಿಸಿದರು.  
ಶಿವಮೊಗ್ಗ

ಸದನ ಟೀಕೆಗೆ ಸೀಮಿತ ಆಗಬಾರದು | Youth Parliament

ಪ್ರಮುಖ ಮುಖ್ಯಾಂಶಗಳು

  • ಸಂಸತ್ ಅಥವಾ ಸದನದಲ್ಲಿ ಅಧ್ಯಯನಪೂರ್ಣ ಚರ್ಚೆ ಆಗಬೇಕು
  • ಇಂದು ಬಾಯಿ ಬಡಿದುಕೊಳ್ಳುವುದೇ ಚರ್ಚೆ ಎಂಬಂತಾದ ಸದನ
  • ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ.ಅವಿನಾಶ್ ಹೇಳಿಕೆ
ಶಿವಮೊಗ್ಗ: ಸಂಸತ್ ಅಥವಾ ಸದನ(Assembly)ದಲ್ಲಿ ಅಧ್ಯಯನಪೂರ್ಣ ಚರ್ಚೆ ಆಗಬೇಕೋ ವಿನಃ ಯಾರನ್ನೋ ಟೀಕೆಸುವುದು ಮತ್ತು ಹೀಯಾಳಿಸುವುದು ಆಗಬಾರದು ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ. ಟಿ.ಅವಿನಾಶ್ ಹೇಳಿದರು. 
ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶನಿವಾರ ಮೇರಾ ಯುವ ಭಾರತ್, ವಿಕಸಿತ ಭಾರತ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಐಕ್ಯೂಎಸಿ ಹಾಗೂ ಕೇಂದ್ರದ ಯುವ ಮತ್ತು ಕ್ರೀಡಾ ಸಚಿವಾಲಯದಿಂದ ಆಯೋಜನೆಗೊಂಡಿದ್ದ ‘ಜಿಲ್ಲಾಮಟ್ಟದ ಯುವ ಸಂಸತ್(Youth Parliament)’ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸದನದಲ್ಲಿ ಬಾಯಿ ಬಡಿದುಕೊಳ್ಳುವುದೇ ಚರ್ಚೆ ಎಂಬಂತಾಗಿದೆ. ಗಂಭೀರ ಸಮಸ್ಯೆಗಳ ಬಗ್ಗೆ, ಅನುಭವಗಳ ಮೇಲೆ ಚರ್ಚೆ ಆಗುತ್ತಿಲ್ಲ. ಸದನದಲ್ಲಿ ಚರ್ಚೆ ಮಾಡುವುದಕ್ಕೆ ತಾತ್ವಿಕ ಚೌಕಟ್ಟು ಮತ್ತು ಅಧ್ಯಯನ ಬೇಕಾಗುತ್ತದೆ ಎಂದರು.
ಸಂಸತ್ ಎಂಬುದು ಪವಿತ್ರವಾದ ದೇಗುಲ ಇದ್ದಂತೆ. ಅದರ ಬಗ್ಗೆ ಅರಿವು ಬೇಕು. ಸಂವಿಧಾನ ಓದುವ ಮತ್ತು ಚರ್ಚೆ ಮಾಡಬೇಕಿದೆ. ಇದು ಯುವ ಸಂಸತ್ ಮೂಲಕ ಸಾಧ್ಯವಿದೆ. ಸಂವಿಧಾನಕ್ಕೆ ವಿಶೇಷ ಆಯಾಮ, ಶಕ್ತಿ ಇದ್ದು, ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ(Freedom) ಮತ್ತು ಘನತೆಯನ್ನು ಕೊಟ್ಟಿದೆ ಎಂದರು. 
ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಪ್ರಸನ್ನಕುಮಾರ್, ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್, ಪ್ರೊ. ಎಚ್.ಎಂ.ನಾಗಾರ್ಜುನ, ಪ್ರೊ. ಜಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.