ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಬಿ.ವೈ.ರಾವೇಂದ್ರ, ಸೋಮಶೇಖರ್ ಇತರರಿದ್ದರು.
ಶಿಕಾರಿಪುರ: ವಚನಗಳೆಂದರೆ ಪ್ರಮಾಣ. ಅವುಗಳು ನಮ್ಮೊಳಗಿನ ಭಾವನೆಗಳೊಡನೆ ಆಡುವ ಚಿಂತನೆಗಳು. ವಚನಗಳು ಸಂರ್ಷಕ್ಕಲ್ಲ, ಸಂವಾದಕ್ಕೆ ಎಂದು ಸಿರಿಗೆರೆ ಶಾಖೆ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶರಣರ ವಚನಗಳು ಪ್ರವಚನಗಳಲ್ಲ. ನುಡಿಯನ್ನು ನಡೆಯನ್ನಾಗಿಸುವ ಸಂದೇಶ ಸಾರುವ ವಾಹಕಗಳು ಎಂದರು.
ನಮ್ಮ ಬದುಕು ಹೇಗಿರಬೇಕು, ಅದು ಹೇಗೆ ಪರಿಶುದ್ಧವಾಗುತ್ತದೆ ಎನ್ನುವುದನ್ನು ಶರಣರು ನಮಗೆ ವಚನಗಳ ಮೂಲಕ ಹೇಳಿದ್ದಾರೆ. ಎಲ್ಲ ಸಮುದಾಯದ ಶರಣರ ಅನುಭಾವದ ಸಂಗಮವೇ ವಚನಗಳಾಗಿವೆ ಎಂದು ಹೇಳಿದರು.
ಸತ್ಯ ಮತ್ತು ಸತ್ವಗಳೇ ಶರಣರ ಆಯುಧಗಳು. ಅವರು ತಮ್ಮ ವಚನದ ಸಾರದಂತೆಯೇ ನಡೆದುಕೊಂಡರು. ನಡೆ&ನುಡಿ, ಬದುಕಲ್ಲಿ ಶುದ್ಧಾತ್ಮರಾಗಿ ಪರಿಶುದ್ಧ ಜೀವನವನ್ನು ನಡೆಸಿದವರು. ನಾವೆಲ್ಲರೂ ಶರಣ ಪರಂಪರೆಯ ವಾರಸುದಾರರು ಎನ್ನುವುದೇ ನಮ್ಮ ಹಿರಿಮೆ ಮತ್ತು ಗರಿಮೆ ಎಂದು ತಿಳಿಸಿದರು.
ಸಂಸದ ಬಿ.ವೈ.ರಾವೇಂದ್ರ ಮಾತನಾಡಿ, ಶಿಕಾರಿಪುರದಲ್ಲಿ ಶರಣರ ಹಬ್ಬ ಆಯೋಜಿಸಲಾಗಿದೆ ಎಂದರೆ ತಪ್ಪಲ್ಲ. ಬಸವಾದಿ ಶರಣರ ಸಾಹಿತ್ಯ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಹಿತ್ಯ ಎಂದರು.
ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಶುಭಾ ಮರವಂತೆ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಜಿಲ್ಲಾಧ್ಯ ಎಚ್.ಎನ್.ಮಹಾರುದ್ರ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವಿರಪ್ಪ, ವೀರಶೈವ ಸಮಾಜದ ಅಧ್ಯ ಸುಧೀರ್, ಕೆ.ಎಚ್.ಪುಟ್ಟಪ್ಪ ಇತರರಿದ್ದರು.