ಶಿಕಾರಿಪುರ ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ಆ-ಯೋ-ಜಿ-ಸಿ-ದ್ದ ಸಸಿ- ನೆ-ಡು-ವ ಕಾರ್ಯಕ್ರಮಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಚಾಲ-ನೆ ನೀಡಿ-ದ-ರು. ಸಿದ್ಲಿಂಗಪ್ಪ, ಎಸ್​.ಪಿ.ನಾಗರಾಜ್​ ಗೌಡ, ಯೋಗೀಶ್​, ಅಶೋಕ್​ ಇತರರಿದ್ದರು. 
ಶಿವಮೊಗ್ಗ

ಮುಂದಿನ ಪೀಳಿಗೆಗೆ ಪರಿಸರವೇ ಉಡುಗೊರೆ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರೈತ ಮೋರ್ಚಾದಿಂದ ಪರಿಸರ ಕಾರ್ಯಕ್ರಮ
  • ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆ
  • ಮುಂದಿನ ಪೀಳಿಗೆಗೆ ಪರಿಸರವೇ ಉಡುಗೊರೆ
ಶಿಕಾರಿಪುರ: ಪ್ರಕೃತಿಯನ್ನು ನಾವು ರಸಿದರೆ, ಪ್ರಕೃತಿ ನಮ್ಮನ್ನು ರಸುತ್ತದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಕಳವಳ ವ್ಯಕ್ತಪಡಿಸಿದರೆ ಸಾಲದು, ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ. ಸಕಾಲಕ್ಕೆ ಮಳೆಯಾಗದೆ ರೈತರು ಕಷ್ಟಪಡುತ್ತಿರುವುದಕ್ಕೆ ಪ್ರಕೃತಿ ಮೇಲಿನ ನಮ್ಮ ಅತಿಯಾದ ಹಸ್ತೇಪವೇ ಕಾರಣ. ಹಸಿರಾದ ಪರಿಸರವನ್ನು ಮುಂದಿನ ಪೀಳಿಗೆಗೆ ಉಡುಗೊರೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಗಿಡ ನೆಡುವ ಕಾರ್ಯಕ್ರಮಗಳು ಕೇವಲ ಪ್ರಚಾರ, ೋಟೋಗಳಿಗೆ ಸೀಮಿತವಾಗದೆ ನೆಟ್ಟ ಪ್ರತಿ ಸಸಿಯನ್ನೂ ಮರವಾಗುವವರೆಗೆ ಜವಾಬ್ದಾರಿಯಿಂದ ಪೋಷಿಸಬೇಕು. ಈ ನಿಟ್ಟಿನಲ್ಲಿ ಸ್ಥಳಿಯ ಸಂ ಸಂಸ್ಥೆಗಳು, ಯುವಕ ಮಂಡಲಗಳು ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ಶಿಕಾರಿಪುರ ೇತ್ರವನ್ನು ಹಸಿರು ೇತ್ರವನ್ನಾಗಿ ಮಾಡಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಶಾಲಾ ಹಂತದಲ್ಲೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಅಗತ್ಯವಿದೆ. ಶಾಲಾ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮೂಲಕವೇ ಗಿಡಗಳನ್ನು ನೆಡಿಸಿ, ಮಕ್ಕಳಿಗೆ ಅದರ ಪೋಷಣೆಯ ಜವಾಬ್ದಾರಿ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಕೃತಿಯ ಅಸಮತೋಲನದಿಂದ ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ಆದ್ದರಿಂದ ರೈತರು ಇನ್ನೂ ಮೆಕ್ಕೆಜೋಳ ಬಿತ್ತನೆಗೆ ಮುಂದಾಗಿಲ್ಲ. ತಾಳಗುಂದ, ಹೊಸೂರು ಹೋಬಳಿಯಲ್ಲಿ ಶೇ.10ರಷ್ಟು ಪ್ರಮಾಣ ಮಾತ್ರ ಬಿತ್ತನೆಯಾಗಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯ ಸಿದ್ಲಿಂಗಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯ ಎಸ್​.ಪಿ.ನಾಗರಾಜ ಗೌಡ, ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯ ಯೋಗೀಶ್​, ಉಪಾಧ್ಯ ಗಿರೀಶ್​, ಪ್ರಧಾನ ಕಾರ್ಯದರ್ಶಿಗಳಾದ ಈಸೂರು ಜಗದೀಶ್​, ಗುರುರಾಜ್​, ಮಂಜಪ್ಪ, ಸತೀಶ್​ ಎ.ಅಣ್ಣಾಪುರ, ಮಹೇಶ್​ ಹುಲ್ಮಾರ್​, ಅಶೋಕ್​, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯ ಬೆಣ್ಣೆ ಪ್ರವಿಣ, ತಾಲೂಕು ಅಧ್ಯ ವೀರನ ಗೌಡ ಇತರರಿದ್ದರು.