ಸೊರಬದ ಕಾನುಕಾರಿಯಲ್ಲಿ ನಿರ್ಮಾಣವಾಗಿರುವ ಸಂತೆ ಮಾರುಕಟ್ಟೆ ಕಟ್ಟಡ, ಸಂತೆ ಮೈದಾನದ ದುರವಸ್ಥೆ.
ಸೊರಬ: ಪಟ್ಟಣದ ಕಾನುಕೇರಿಯ ಸರ್ವೇ ನಂ. 113ರಲ್ಲಿ ಸಂತೆ ಮಾರುಕಟ್ಟೆ ಕಟ್ಟಡ ಮತ್ತು ಸಂತೆ ಮೈದಾನ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ. ಉದ್ಘಾಟನೆಯಾಗಿ ವರ್ಷ ಕಳೆದರೂ ಸಂತೆಗೆ ಅವಕಾಶ ದೊರೆತಿಲ್ಲ.
ಸೊರಬದಲ್ಲಿ ಶಾಶ್ವತ ಸಂತೆ ಮಾರುಕಟ್ಟೆ ಇಲ್ಲದೆ ಕಳೆದ 10 ವರ್ಷಗಳಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಐದು ವರ್ಷಗಳ ಹಿಂದೆ 5 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಸಂತೆ ಮಾರುಕಟ್ಟೆ ಮಾದರಿಯಲ್ಲಿ ಸ್ಥಳಿಯ ವ್ಯಾಪಾರ ವಹಿವಾಟಿನ ಅನುಗುಣಕ್ಕೆ ತಕ್ಕಂತೆ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ತರಕಾರಿ ಸಂಗ್ರಹಕ್ಕೆ ಮಳಿಗೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಸಂತೆ ಮೈದಾನ ನಿರ್ಮಾಣಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮಳಿಗೆ ಮತ್ತು ಮಹಡಿಯಲ್ಲಿ ದಾಸ್ತಾನು ಮಾಡಲು 30 ಸಾಮಾನ್ಯ ಮಳಿಗೆಗಳು ಹಾಗೂ 10 ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. ಇಂಥದ್ದೊಂದು ಕಟ್ಟಡ ಮತ್ತು ಮಾರುಕಟ್ಟೆ ವ್ಯವಸ್ಥೆ ನೀಡುವುದು ರೈತರಿಗೆ, ವರ್ತಕರಿಗೆ ಪ್ರಯೋಜನಕಾರಿ.
ಅನೇಕ ಸಮಸ್ಯೆಗಳ ನಡುವೆಯೇ ನಿರ್ಮಾಣಗೊಂಡ ಕಟ್ಟಡವನ್ನು ಪರಿಪೂರ್ಣಗೊಳಿಸದೆ ತರಾತುರಿಯಲ್ಲಿ 2024ರ ಡಿಸೆಂಬರ್ನಲ್ಲಿ ಉದ್ಘಾಟಿಸಲಾಯಿತು. ಲೋಕೋಪಯೋಗಿ ಇಲಾಖೆ ಪುರಸಭೆಗೆ ಹಸ್ತಾಂತರ ಮಾಡಲು ಮುಂದಾಗಿತ್ತು. ಆದರೆ ಪುರಸಭೆ ಸದಸ್ಯರು ಹಸ್ತಾಂತರಕ್ಕೆ ವಿರೋಧಿಸಿದ್ದರು. ಸಮಾನ್ಯ ಸಭೆಯಲ್ಲೂ ಕಟ್ಟಡ ಹಸ್ತಾಂತರಕ್ಕೆ ವಿರೋಧ ವ್ಯಕ್ತವಾಯಿತು. ಇಂದಿಗೂ ಕಟ್ಟಡ ಹಸ್ತಾಂತರಗೊಳ್ಳದೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಮುತ್ತ ಗಿಡಗಂಟಿ ಬೆಳೆದಿವೆ. ನಾಯಿಗಳ ಆವಾಸ ಸ್ಥಾನವಾಗಿದೆ. 5 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಸಂತೆ ಮಾರುಕಟ್ಟೆ ಕಟ್ಟಡ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗದೆ ಪಾಳುಬಿದ್ದಂತಾಗಿದೆ.
ಸೊರಬದಲ್ಲ್ಲಿ ಹಳೇ ಮಾರುಟ್ಟೆ ಸ್ಥಳಾಂತರವಾದ ನಂತರ ತಾಲೂಕಿನಲ್ಲಿ ಒಂದು ಸುಸಜ್ಜಿತ ಮಾರುಕಟ್ಟೆ ಇಲ್ಲದೆ ಇಂದಿಗೂ ಪರದಾಡುವಂತಾಗಿದೆ. ಈಗ ಸಂತೆ ಮಾರುಕಟ್ಟೆಗೆ ಜಾಗವಿಲ್ಲದೆ ಎಪಿಎಂಸಿ ಯಾರ್ಡ್ನಲ್ಲಿ ಪುರಸಭೆ ವಾರಕ್ಕೆ 5000 ರೂ. ಬಾಡಿಗೆ ಕೊಟ್ಟು ಸಂತೆ ನಡೆಸುತ್ತದೆ. ಬಾಡಿಗೆ ಮೊತ್ತವಾಗಿ ಎಪಿಎಂಸಿಗೆ ಪುರಸಭೆ 10 ಲ ರೂ. ಬಾಕಿ ಉಳಿಸಿಕೊಂಡಿದೆ. ಸಾಗರ& ಸೊರಬ ಮುಖ್ಯರಸ್ತೆಯಾಗಿರುವುದರಿಂದ ವಾಹನ ದಟ್ಟಣೆ ನಡುವೆ ಸಂಚಾರ ಮತ್ತು ವ್ಯಾಪಾರಕ್ಕೆ ತೀವ್ರ ತೊಂದರೆಯಾಗಿದೆ. ಒಟ್ಟಾರೆ ಸೊರಬದಲ್ಲಿ ಸಂತೆ ಮಾರುಕಟ್ಟೆ ನಿಮಾರ್ಣಕ್ಕೆ ಜನಪ್ರತಿನಿಧಿಗಳ ಮತ್ತು ಸಂಬಂಧಿಸಿದ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿದೆ. ಒಂದೆಡೆ ಸರಿಯಾಗಿ ಸಂತೆಯೂ ನಡೆಯುತ್ತಿಲ್ಲ. ಇನ್ನೊಂದೆಡೆ ನಿರ್ಮಿಸಿರುವ ಕಟ್ಟಡವೂ ಸುಸಜ್ಜಿತವಾಗಿಲ್ಲ.
ಸಂತೆ ಮಾರುಕಟ್ಟೆ ಕಟ್ಟಡ ಮತ್ತು ಸಂತೆ ಮೈದಾನಕ್ಕೆ ಎಪಿಎಂಸಿಯಿಂದ ಸಂತೆ ಸ್ಥಳಾಂತರಿಸುವಂತೆ ಹಾಗೂ ಹೊಸ ಕಟ್ಟಡ, ಸಂತೆ ಮೈದಾನದ ಕೆಲವು ಮೂಲ ಸಮಸ್ಯೆ ಪರಿಹರಿಸಲು ಅನುದಾನ ಕೋರಿ ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇವೆ. ಬೇಡಿಕೆ ಈಡೇರರುವ ಭರವಸೆ ಇದೆ.
> ಪ್ರಶಾಂತ ಮೇಸ್ತ್ರಿ, ಪುರಸಭೆ ಆಶ್ರಯ ಸಮಿತಿ ಸದಸ್ಯ, ಸೊರಬ
ನೂತನವಾಗಿ ನಿರ್ಮಾಣಗೊಳ್ಳುವ ಸಂತೆ ಮೈದಾನಕ್ಕೆ ಕಾಂಕ್ರೀಟ್ ಲಾಕರ್, ುಟ್ಪಾತ್ ಅಗತ್ಯವಿದೆ. ಒಂದು ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಸದ್ಯದಲ್ಲೇ ಅನುಮೋದನೆ ದೊರೆಯುವ ನಿರೀೆಯಿದೆ. ಸಂತೆ ಮಾರುಕಟ್ಟೆ ವರ್ಗಾವಣೆ ಬಗ್ಗೆ ಆಡಳಿತಾಧಿಕಾರಿ ಅವರ ಒಪ್ಪಿಗೆ ಪಡೆಯಲಾಗುತ್ತದೆ.
> ಎಚ್.ವಿ.ಚಂದನ್, ಪುರಸಭೆ ಮುಖ್ಯಾಧಿಕಾರಿ, ಸೊರಬ
ಒಂದು ವರ್ಷದ ಹಿಂದೆಯೇ ಸಂತೆ ಮಾರುಕಟ್ಟೆ ಉದ್ಘಾಟನೆಯಾಗಿದೆ. ಸಣ್ಣಪುಟ್ಟ ಕಾಮಗಾರಿಗಳನ್ನು ಸರಿಪಡಿಸಿ ಮೂಲ ಸೌಕರ್ಯ ಒದಗಿಸಿ ಹಸ್ತಾಂತರಿಸಲು ಕೇಳಿಕೊಳ್ಳಲಾಗಿತ್ತು. ಆದರೆ ಪುರಸಭೆ ಸದ್ಯಸರು ಹಸ್ತಾಂತರಕ್ಕೆ ಒಪ್ಪಿರಲಿಲ್ಲ. ಮುಖ್ಯಾಧಿಕಾರಿ ಅವರಿಗೆ ಹಸ್ತಾಂತರಕ್ಕೆ ಕೇಳಿಕೊಳ್ಳಲಾಗಿದೆ.
> ಕಿರಣ್ಕುಮಾರ್, ಪಿಡಬ್ಲುಡಿ ಸಹಾಯಕ ಅಭಿಯಂತ