ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸರಳ ಸಾಮೂಹಿಕ ವಿವಾಹ ಹಾಗೂ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ನಾದಮಯಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರಗ ಜ್ಞಾನೇಂದ್ರ, ರಮೇಶ್ ಹೆಗ್ಡೆ, ಚೇತನ್ ಗೌಡ ಇದ್ದರು. 
ಶಿವಮೊಗ್ಗ

ಸರ್ವರನ್ನೂ ಸಮಾನತೆಯಿಂದ ಕಾಣುವುದು ಹಿಂದೂ ಧರ್ಮದ ಆಶಯ I hindu dharma

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಮತ
  • ಆದಿಚುಂಚನಗಿರಿ ಶಾಖಾ ಮಠದಲ್ಲಿ ಸಾಮೂಹಿಕ ವಿವಾಹ
  • 50 ವರ್ಷ ಪೂರ್ಣಗೊಳಿಸಿದ ದಂಪತಿಗಳಿಗೆ ಸನ್ಮಾನ
ಶಿವಮೊಗ್ಗ: ಸಾಮರಸ್ಯ, ಸಹಬಾಳ್ವೆ ಹಾಗೂ ಹಿತಕರ ಬದುಕು ರೂಪುಗೊಳ್ಳಲು ನಮ್ಮ ಧರ್ಮ ಹಾಗೂ ಪರಂಪರೆಯೇ ಕಾರಣ. ನಮ್ಮ ಧರ್ಮ (religion) ಹಾಗೂ ಎಲ್ಲ ಧರ್ಮಗಳನ್ನು ಪ್ರೀತಿಸುವ ಆದಿಚುಂಚನಗಿರಿ (adihunchanagiri) ಮಹಾಸಂಸ್ಥಾನ ಮಠ ಮಾದರಿ ಎಂದು ಚಿತ್ರದುರ್ಗ (chitradurga) ದ ಮಾದಾರ ಚೆನ್ನಯ್ಯ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ಶರಾವತಿ ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕಾಲಬೈರವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ, 27ನೇ ವರ್ಷದ ಸರಳ ಸಾಮೂಹಿಕ ವಿವಾಹ ಹಾಗೂ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಮಠ ನಿಜಕ್ಕೂ ದೇಶದಲ್ಲಿ ಸಮಾನತೆ ಕಟ್ಟುವ ಕೆಲಸ ಮಾಡಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸರ್ವಧರ್ಮ ಸಮಾನತೆ ಸಾರಿದ್ದರು. ನಿರ್ಮಲಾನಂದನಾಥ ಶ್ರೀಗಳು ಮಹಾಸಂಸ್ಥಾನವನ್ನು ಇಡೀ ವಿಶ್ವದಲ್ಲೇ ಪವಿತ್ರ ಕ್ಷೇತ್ರವನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವದಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಎಲ್ಲರಿಗೂ ಮಾರ್ಗದರ್ಶಕ ಆಗಿರುವುದು ಸಂತೋಷದ ವಿಷಯ ಎಂದರು.
ದಾಸರಿಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ರೇಷ್ಮೆ ಮತ್ತು ವಿದ್ಯುತ್ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಇತರರಿದ್ದರು.

ಹಾದಿ ತಪ್ಪಿಸುವ ಕಾರ್ಯಕ್ರಮ

ಹೆಂಡತಿಯ ಪ್ರಾರ್ಥನೆಯಿಂದ ಗಂಡನ ಶ್ರೇಯೋಭಿವೃದ್ಧಿಯಾಗುತ್ತದೆ. ಪತ್ನಿ ಎಂದಿಗೂ ಪತಿಯ ಶ್ರೇಯಸ್ಸನ್ನು ಬಯಸುತ್ತಾಳೆ. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಅನೇಕರು ದುಶ್ಚಟಗಳಿಂದ ಹೊರಬಂದು ಸುಖ ಸಂಸಾರ ನಡೆಸಿದ ಅನೇಕ ಘಟನೆಗಳನ್ನು ನಾವು ನೆನಪಿಸಿಕೊಳ್ಳಬಹುದು. ಇತ್ತೀಚೆಗೆ ದೃಶ್ಯ ಮಾಧ್ಯಮಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವುದು, ಅನೈತಿಕ ಸಂಬಂಧಗಳನ್ನು ಬೆಳೆಸುವ ಪಾತ್ರಗಳನ್ನೇ ಹೆಚ್ಚು ತೋರಿಸಲಾಗುತ್ತದೆ. ಇದರಿಂದ ಯುವಸಮೂಹ ಹಾದಿ ತಪ್ಪುವ ಅಪಾಯವಿದೆ ಎಂದರು.
"

ಕಷ್ಟ-ಸುಖಗಳನ್ನ ಸಮನಾಗಿ ಸ್ವೀಕರಿಸಿ ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿದವರನ್ನು ಸನ್ಮಾನಿಸಿರುವುದು ಅತ್ಯಂತ ಸಂತೋಷಕರ ಹಾಗೂ ಶ್ಲಾಘನೀಯ ಕಾರ್ಯಕ್ರಮ. ಏನೇ ಕಷ್ಟ, ಸುಖ ಬಂದರೂ ನಾವುಗಳು ಒಟ್ಟಾಗಿ ಇರುತ್ತೇವೆ ಎಂಬುದೇ ಸುದೀರ್ಘ ದಾಂಪತ್ಯದ ಗುಟ್ಟು.