ಖಾಸಗಿ ಶಾಲೆಯಮೃತ ಶಿಕ್ಷಕಿ ಜೆ.ರೂಪಾ 
ಶಿವಮೊಗ್ಗ

ವಾಯುವಿಹಾರಕ್ಕೆ ತೆರಳಿದ್ದ ಶಿಕ್ಷಕಿ ಕಾರು ಡಿಕ್ಕಿಯಾಗಿ ಸಾವು Teacher's death

ಸಾಗರ ರಸ್ತೆ ರಿಂಗ್ ರೋಡ್ ಬಳಿ ಅಪರಿಚಿತ ಕಾರು ಡಿಕ್ಕಿಯಾಗಿ ವಾಯುವಿಹಾರಕ್ಕೆ ತೆರಳಿದ್ದ ಖಾಸಗಿ ಶಾಲೆ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗ: ಸಾಗರ ರಸ್ತೆ ರಿಂಗ್ ರೋಡ್ ಬಳಿ ಅಪರಿಚಿತ ಕಾರು ಡಿಕ್ಕಿಯಾಗಿ ವಾಯುವಿಹಾರಕ್ಕೆ ತೆರಳಿದ್ದ ಖಾಸಗಿ ಶಾಲೆ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಡಿಕೊಪ್ಪದ ಖಾಸಗಿ ಶಾಲೆಯ ಶಿಕ್ಷಕಿ, ಶಕ್ತಿಧಾಮ ಲೇಔಟ್‌ನ ನಿವಾಸಿ ಜೆ.ರೂಪಾ(41) ಮೃತ ಶಿಕ್ಷಕಿ. ಭಾನುವಾರ ಬೆಳಗ್ಗೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ವಾಕಿಂಗ್ ಮುಗಿಸಿ ಮನೆಗೆ ರಸ್ತೆ ಬದಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿ ಮೃತಪಟ್ಟಿದ್ದಾರೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ಪತ್ತೆಗೆ ಮುಂದಾಗಿದ್ದಾರೆ.