ಸಾಗರದ ಶೃಂಗೇರಿ ಶಂಕರಮಠದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರವನ್ನು ಧರ್ಮಾಧಿಕಾರಿ ಅಶ್ವಿನಿಕುಮಾರ್ ಉದ್ಘಾಟಿಸಿದರು. ಎಸ್.ಕೆ.ಪ್ರಭಾವತಿ, ಶ್ರಾವ್ಯಾ ಸಾಗರ್, ಸಚಿನ್ ಹೆಗಡೆ ಇತರರಿದ್ದರು. 
ಶಿವಮೊಗ್ಗ

ಮಕ್ಕಳಿಗೆ ಧಾರ್ಮಿಕ ಮೌಲ್ಯ ತಿಳಿಸಿ

ಜಿ. ಗಜೇಂದ್ರ
ಸಾಗರ: ಆಧುನೀಕರಣದ ಪ್ರಭಾವಕ್ಕೆ ಒಳಗಾಗಿರುವ ಮಕ್ಕಳಿಗೆ ಧಾರ್ಮಿಕ ಮೌಲ್ಯಗಳನ್ನೂ ಕಲಿಸಬೇಕು. ನೈತಿಕತೆ, ಉತ್ತಮ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಶೃಂಗೇರಿ ಶಂಕರಮಠ ಸಂಸ್ಕಾರ ಸುಧಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಾಗರದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್ ಹೇಳಿದರು.
ನಗರದ ಶೃಂಗೇರಿ ಶಂಕರಮಠದಲ್ಲಿ ಹಮ್ಮಿಕೊಂಡಿರುವ 14 ದಿನಗಳ ಸಂಸ್ಕಾರ ಸುಧಾ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬೇಸಿಗೆ ರಜೆ ವ್ಯರ್ಥವಾಗಬಾರದು. ಮಕ್ಕಳು ಆಟ-ಪಾಠದ ಜತೆಗೆ ಸಂಸ್ಕಾರವನ್ನೂ ಕಲಿಯಬೇಕು. ವಕೀಲೆ  ಶ್ರಾವ್ಯಾ ಸಾಗರ್ ಮಾರ್ಗದರ್ಶನದಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.
ಮಕ್ಕಳಲ್ಲಿ ಸಂಸ್ಕಾರ ಬಿತ್ತಿದರೆ ಮುಂದೆ ಅವರು ಸಮಾಜ, ಧರ್ಮಮುಖಿಯಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶ ಶಂಕರಮಠದ್ದಾಗಿದೆ. 30ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ. ಶಂಕರಮಠವು ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಸುತ್ತ ಬಂದಿದೆ ಎಂದು ತಿಳಿಸಿದರು. ಎಸ್.ಕೆ.ಪ್ರಭಾವತಿ, ಶ್ರಾವ್ಯಾ ಸಾಗರ್, ಸಚಿನ್ ಹೆಗಡೆ ಇತರರಿದ್ದರು.