ಆನವಟ್ಟಿಯ ಚಾಮರಾಜ ಬಡಾವಣೆಯ ಸರ್ಕಾರಿ ಅಂಗನವಾಡಿ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು. ರವೀಂದ್ರ ನಾಯಕ್, ಬಸವರಾಜಪ್ಪ, ನಾಗಪ್ಪ, ಅರುಣ್ ಕುಮಾರ್ ಇತರರಿದ್ದರು.
ಸೊರಬ: ಮಕ್ಕಳಿಗೆ ಬಾಲ್ಯದಿಂದಲೇ ಸಂಸತಿ ಮತ್ತು ಸಂಸ್ಕಾರ ಬೆಳೆಸಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವಂತೆ ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂದು ಅನವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿಜೆಪಿ ಮುಖಂಡ ಉಮೇಶ್ ಉಡುಗಣಿ ಹೇಳಿದರು.
ತಾಲೂಕಿನ ಆನವಟ್ಟಿಯ ಸರ್ಕಾರಿ ಅಂಗನವಾಡಿ ಶಾಲೆಯಲ್ಲಿ ಹೊಸ ವರ್ಷದ ಅಂಗವಾಗಿ ಮಕ್ಕಳಿಂದ ಕುಂಭ ಮೇಳ ಹಾಗೂ ಸೇವಾ ನಿವೃತ್ತಿ ಹೊಂದಿದ ನೌಕರರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ವಾತಾವರಣ ಸುಸಜ್ಜಿತವಾಗಿದ್ದರೆ ಪ್ರಗತಿಯೂ ಉತ್ತಮವಾಗಿರುತ್ತದೆ ಎಂದರು.
ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಕೆಲಸ. ಅಂಗನವಾಡಿ ಮಕ್ಕಳ ಸುರಕ್ಷೆ ದೃಷ್ಟಿಯಿಂದ ಕಾಂಪೌಂಡ್ ಅಗತ್ಯವಿದೆ. ಇಲ್ಲಿ ನೀರಿನ ಸೌಲಭ್ಯ, ಕಲಿಕೆಯ ವಾತಾವರಣ ಉತ್ತಮವಾಗಿದೆ. ಒಂದು ಸುವ್ಯವಸ್ಥಿತ ಶಾಲೆ ಮಾಡಬೇಕಾದರೆ ಮೂಲ ಸೌಕರ್ಯ ಮುಖ್ಯ. ಅವುಗಳನ್ನು ಪರಿಪೂರ್ಣವಾಗಿ ಒದಗಿಸಿದರೆ ಉತ್ತಮ ಶಾಲೆಯಾಗಲು ಸಾಧ್ಯ ಎಂದು ಹೇಳಿದರು.
ನಿವೃತ್ತಿ ಹೊಂದಿದ ರವೀಂದ್ರ ನಾಯಕ್, ಬಸವರಾಜಪ್ಪ, ನಾಗಪ್ಪ, ಅರುಣ್ಕುಮಾರ್ ಅವರನ್ನು ಸನ್ಮಾನಿಸಲಾಯಿತು. ದೇವಪ್ಪ, ಚಾಂದ್ ಸಾಬ್, ಲಕ್ಷ$್ಮಣಪ್ಪ, ಲೀಲಾವತಿ, ಪುಟ್ಟಮ್ಮ, ಮೇಲ್ವಿಚಾರಕಿ ಕವಿತಾ ಇತರರಿದ್ದರು.