ಶಿಕಾರಿಪುರದ ಬಾಪೂಜಿ ಎಜುಕೇಷನ್ ಸೊಸೈಟಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವವನ್ನು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಉದ್ಘಾಟಿಸಿದರು. ಬಿ.ಪಾಪಯ್ಯ, ಚಂದ್ರಪ್ಪ, ಡಾ. ಹಾಫೀಜ್ ಕರ್ನಾಟಕಿ, ಉಮೇಶ್, ನವೀನ್‌ಕುಮಾರ್ ಇತರರಿದ್ದರು.
ಶಿಕಾರಿಪುರ: ವಿದ್ಯಾರ್ಥಿಗಳಿಗೆ ಶಿಕ್ಷಣದ ಪಠ್ಯದ ಜತೆಗೆ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ ಕಲಿಸುವುದು ಅಗತ್ಯ ಎಂದು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬಾಪೂಜಿ ಎಜುಕೇಷನಲ್ ಸೊಸೈಟಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಶಿಕ್ಷಣ. ಅಕ್ಷರವು ಸಮಾಜದಲ್ಲಿ
ಸಾಕ್ಷರತೆ ಹೆಚ್ಚಿಸುವ ಜತೆ ಸಾಮಾಜಿಕ ಕಳಕಳಿ ಮೂಡಿಸುತ್ತದೆ ಎಂದು ತಿಳಿಸಿದರು.
ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಉಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಗಮನ ಹರಿಸಬೇಕು ಎಂದರು.
ಇತಿಹಾಸ ಸಂಶೋಧಕ ರಮೇಶ್ ಹಿರೇಜಂಬೂರು ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಆಸಕ್ತರಾಗಬೇಕು. ಜ್ಞಾನ ವೃದ್ಧಿಸುವುದರಿಂದ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ಕನಸು
ಸಾಕಾರಗೊಳ್ಳಲು ನಿರಂತರ ಪರಿಶ್ರಮ ಅಗತ್ಯ ಎಂದು ಹೇಳಿದರು.
ಸಾಹಿತಿ ಡಾ. ಅಮ್ಜದ್ ಹುಸೇನ್ ಕರ್ನಾಟಕಿ ಮಾತನಾಡಿ, ಬದುಕು ಸುಂದರವಾಗಲು ಸಹೃದಯ, ಸಹಬಾಳ್ವೆ ನಮಗೆ ಮಂತ್ರ ಆಗಬೇಕು. ಎಲ್ಲರನ್ನೂ ಪ್ರೀತಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.
ಸಮಾಜದಿಂದ ಬದುಕಿನಲ್ಲಿ ದೊರೆತ ಅನುಭವ ಜೀವನ ಶೈಲಿಯನ್ನು ಬದಲಾಯಿಸುತ್ತದೆ. ಸತ್ಯ ಮತ್ತು ಸತ್ವಗಳು ನಮಗೆ ಹೆಚ್ಚಿನ ಯಶಸ್ಸು ತಂದುಕೊಡುತ್ತವೆ ಎಂದರು.
ಮಕ್ಕಳ ಸಾಹಿತಿ ಡಾ. ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಅವರಿಗೆ ಬಾಪೂಜಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಪಾಪಯ್ಯ, ತಹಸೀಲ್ದಾರ್ ಮಂಜುಳಾ ಭಜಂತ್ರಿ, ಬಿಇಒ ಲೋಕೇಶ್ವರಪ್ಪ, ಸಂಸ್ಥೆ ಗೌರವಾಧ್ಯಕ್ಷ ಚಂದ್ರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್
ಕುಮಾರ್, ರತ್ನಮ್ಮ, ಪಿ.ಆರ್.ಪವಿತ್ರಾ, ವೀರೇಂದ್ರಕುಮಾರ್, ರಾಘವೇಂದ್ರ ಕುಲಕರ್ಣಿ, ಮುಸ್ತಾ, ಡಾ. ಪಂಕಜಾ, ಹುಚ್ರಾಯಪ್ಪ ಇತರರಿದ್ದರು.