ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರು ಬೆಳೆಹಾನಿ ಪರಿಶೀಲಿಸಿದರು. ತಿಪ್ಪೇಸ್ವಾಮಿ, ಕುಮಾರ ನಾಯ್ಕ, ದಾದಾಪೀರ್ ಇತರರಿದ್ದರು.
ಆಯನೂರು: ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರು, ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕುಂಚೇನಹಳ್ಳಿ, ಹಿಟ್ಟೂರು, ನಾರಾಯಣಪುರು, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಚಿಕ್ಕಮರಸ, ಹಾರನಹಳ್ಳಿ, ಕೊನಗವಳ್ಳಿ, ಮೈಸವಳ್ಳಿ, ತ್ಯಾಜವಳ್ಳಿ, ಮುದ್ದಿನಕೊಪ್ಪ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು.
ಮಳೆ ಕೈಕೊಟ್ಟು ಬೆಳೆಗಳೆಲ್ಲ ನಾಶವಾಗಿವೆ. ನಮ್ಮ ಭಾಗದಲ್ಲಿ ಪೈಪ್‌ಲೈನ್ ಆಗಿದ್ದರೂ ನೀರು ಬರುತ್ತಿಲ್ಲ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಕಾಲುವೆಗಳ ಸ್ವಚ್ಛತೆ ಆಗಿಲ್ಲ. ಸರಿಯಾದ ರಸ್ತೆಗಳಿಲ್ಲ. ಮೆಕ್ಕೆಜೋಳಕ್ಕೆ ಕೀಟಬಾಧೆ ಉಂಟಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ರೈತರು ಸಮಸ್ಯೆಗಳನ್ನು ಹೇಳಿಕೊಂಡರು.
ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ಪರಿಹಾರ ಸೂಚಿಸಲಾಗುವುದು. ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಗಮನಕ್ಕೆ ತರುತ್ತೇನೆ ಎಂದು ಶಾರದಾ ಪೂರ‌್ಯಾನಾಯ್ಕಾ ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕುಮಾರ ನಾಯ್ಕ, ದಾದಾಪೀರ್, ಹುಸೇನ್ ಸಾಬ್, ರಾಜು, ತೋಟಗಾರಿಕಾ, ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಇದ್ದರು.