ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿದರು. ಜಿ.ಆರ್.ರಾಘವೇಂದ್ರ ಸ್ವಾಮಿ,ಎನ್.ಮಂಜುನಾಥ್, ಕೆ.ಪಿ.ಶ್ರೀಪಾಲ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಬಳ್ಳೇಕೆರೆ ಸಂತೋಷ್, ಮಂಜುನಾಥ್, ಸಮನ್ವಯ ಕಾಶಿ, ಸುರೇಖಾ ಹೆಗಡೆ, ಬಿ.ಗೋಪಿನಾಥ್, ವಸಂತ್ ಹೋಬಳಿದಾರ್ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

14ರಂದು ಸಂಕಲ್ಪ ಶಿವಮೊಗ್ಗದಿಂದ ಸ್ವದೇಶಿ ಮಂತ್ರ | Swadeshi Mantra

ಪ್ರಮುಖ ಮುಖ್ಯಾಂಶಗಳು

  • ಸ್ವಾತಂತ್ರ್ಯೋತ್ಸವ ಅಂಗವಾಗಿ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿ
  • 250ಕ್ಕೂ ಅಧಿಕ ಕಲಾವಿದರು, ನೃತ್ಯ ಕಲಾವಿದರಿಂದ ನೃತ್ಯ ಪ್ರದರ್ಶನ
  • ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾಹಿತಿ
ಶಿವಮೊಗ್ಗ: ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ 35ಕ್ಕೂ ಅಧಿಕ ಸಂಘ ಸಂಸ್ಥೆಗಳ ಒಕ್ಕೂಟ ಸಂಕಲ್ಪ ಶಿವಮೊಗ್ಗದಿಂದ ಸ್ವದೇಶಿ ಮಂತ್ರ(Swadeshi Mantra

)-2026 ಸ್ವಾತಂತ್ರೃ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ಆ.14ರಂದು ರಾತ್ರಿ 9ರಿಂದ 12ರವರೆಗೆ ನಗರದ ಟೀ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ(C.S.Shadakshari) ಹೇಳಿದರು.

ಸಮನ್ವಯ ಟ್ರಸ್ಟ್ ಅನೇಕ ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿತ್ತು. ಇದೇ ಮೊದಲ ಬಾರಿಗೆ ವ್ಯಕ್ತಿ ಅಥವಾ ಸಂಸ್ಥೆ ಮುಖ್ಯವಾಗದೆ ಎಲ್ಲರೂ ಸೇರಿ ಸಮಾಜಮುಖಿ ಕಾರ್ಯ ಕೈಗೊಳ್ಳಬೇಕೆಂಬ ಚಿಂತನೆ ಫಲವಾಗಿ ಸಂಕಲ್ಪ ಶಿವಮೊಗ್ಗ(Sankalpa Shivamogga) ಆರಂಭವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
250ಕ್ಕೂ ಅಧಿಕ ಕಲಾವಿದರು, ನೃತ್ಯ ಕಲಾವಿದರು ದೇಶಭಕ್ತಿ, ನಾಡು-ನುಡಿ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರುವ ಗೀತೆಗಳು ಮತ್ತು ನೃತ್ಯ ಪ್ರದರ್ಶಿಸುವರು. ನಗರದ ಸ್ಥಳೀಯ ಕಲಾವಿದರಿಗೂ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಿರಂತರವಾಗಿ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮ(Cultural and patriotic program) ನಡೆಯಲಿವೆ. 10 ಯೋಧರನ್ನು ಸನ್ಮಾನಿಸಲಾಗುವುದು. ಭಾಷಣ ಅಥವಾ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದರು.
ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸಾಗರದ ಯೋಧ ಸುಭಾಶ್ಚಂದ್ರ ಬೋಸ್ ತೇಜಸ್ವಿ(Warrior SubhasChandra Bose Tejaswi) ಕಾರ್ಯಕ್ರಮ ಉದ್ಘಾಟಿಸುವರು. ಮಧ್ಯರಾತ್ರಿ 12ಕ್ಕೆ ಪಟಾಕಿ ಸಿಡಿಸಿ 5ರಿಂದ 6 ಸಾವಿರ ಜನರಿಗೆ ಸಿಹಿ ಹಂಚಲಾಗುವುದು. ರಾಷ್ಟ್ರಗೀತೆ(National anthem)ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಗುವುದು. ಆಸ್ಕ್ ಬೆಂಗಳೂರು, ಆಸ್ಕ್ ಮೈಸೂರು ಮಾದರಿಯಲ್ಲಿ ನಗರದಲ್ಲಿ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳನ್ನು ಬಿತ್ತರಿಸುವ ಹಾಗೂ ಸಾರ್ವಜನಿಕರಿಗೆ ಮಾಹಿತಿ ರವಾನಿಸುವ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ‘ಆಸ್ಕ್ ಶಿವಮೊಗ್ಗ’(Ask Shivamogga) ಇನ್‌ಸ್ಟಾಗ್ರಾಂ ಪೇಜ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಮಳೆ ಬಂದರೂ ಕಾರ್ಯಕ್ರಮ ಸ್ಥಗಿತಗೊಳಿಸಲ್ಲ. ರೈನ್‌ಕೋಟ್(Raincoat), ಕ್ಯಾಪ್ ಅಥವಾ ಛತ್ರಿ ತರಬೇಕು. ಶುಭ್ರ ಬಿಳಿ ಬಟ್ಟೆಯಲ್ಲೇ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು. ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ವಕೀಲ ಕೆ.ಪಿ.ಶ್ರೀಪಾಲ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಬಳ್ಳೇಕೆರೆ ಸಂತೋಷ್, ಮಂಜುನಾಥ್, ಸಮನ್ವಯ ಕಾಶಿ, ಸುರೇಖಾ ಹೆಗಡೆ, ಬಿ.ಗೋಪಿನಾಥ್, ವಸಂತ್ ಹೋಬಳಿದಾರ್ ಸುದ್ದಿಗೋಷ್ಠಿಯಲ್ಲಿದ್ದರು.
"

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಕುರಿತು ಚರ್ಚೆ ನಡೆದಿದೆ. ನಾಡು, ನುಡಿ, ದೇಶ, ಭಾಷೆ ಹಾಗೂ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ.

— ಸಿ.ಎಸ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ