ಸೊರಬ ತಾಲೂಕಿನ ಕೋಟಿಪುರ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಂಜುನಾಥ್ ಕುನ್ನೂರ್ ಉದ್ಘಾಟಿಸಿದರು. ಕಾರ್ತಿಕ್ ಸಾಹುಕಾರ್, ಕೆ.ಕೆ.ಎಲ್ಲಪ್ಪ ನೇಹಲ್ ಇತರರಿದ್ದರು.
ಸೊರಬ: ನಿರಂತರ ಪರಿಶ್ರಮ ವಹಿಸಿ ಅಧ್ಯಯನ ನಡೆಸುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಲೋಕಸಭೆ ಮಾಜಿ ಸದಸ್ಯ ಮಂಜುನಾಥ ಕುನ್ನೂರ್ ಹೇಳಿದರು.
ತಾಲೂಕಿನ ಕೋಟಿಪುರ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಭವಿಷ್ಯದ ಬಗ್ಗೆ ದೃಷ್ಟಿಕೋನ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮಿಂದ ಅಸಾಧ್ಯ ಎಂಬ ಮನೋಭಾವ ಹೊಂದಿರಬಾರದು. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ತಿಕ್ ಸಾಹುಕಾರ್ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯ. ಮಂಜುನಾಥ ಕುನ್ನೂರ್ ಅವರು ಬಹಳಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಶಿಗ್ಗಾವ್‌ನಲ್ಲಿ ಕಿವುಡ ಹಾಗೂ ಮೂಕ ವಿದ್ಯಾರ್ಥಿಗಳಿಗೆ ಶಾಲೆ ತೆರೆದಿರುವುದು ಪ್ರಶಂಸನೀಯ ಎಂದರು.
ಬಾಸೂರು ಶ್ರೀ ವೃಷಭೇಂದ್ರ ಸ್ವಾಮಿ, ಮುಖ್ಯಶಿಕ್ಷಕ ಕೆ.ಕೆ.ಎಲ್ಲಪ್ಪ ನೇಹಲ್, ಸೇಜಲ್, ಬಸವರಾಜ್, ಕಾಂತಪ್ಪ, ಶಿಾನ್, ಕಿರಣ್ ಕುಮಾರ್, ವಿ.ಕೆ.ಶ್ರುತಿ, ಜ್ಯೋತಿ, ಎಸ್.ಎಂ.ವಿದ್ಯಾ ಇತರರಿದ್ದರು.ನಿರಂತರ ಪರಿಶ್ರಮ ವಹಿಸಿ ಅಧ್ಯಯನ ನಡೆಸುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಲೋಕಸಭೆ ಮಾಜಿ ಸದಸ್ಯ ಮಂಜುನಾಥ ಕುನ್ನೂರ್ ಹೇಳಿದರು.
ತಾಲೂಕಿನ ಕೋಟಿಪುರ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಭವಿಷ್ಯದ ಬಗ್ಗೆ ದೃಷ್ಟಿಕೋನ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮಿಂದ ಅಸಾಧ್ಯ ಎಂಬ ಮನೋಭಾವ ಹೊಂದಿರಬಾರದು. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ತಿಕ್ ಸಾಹುಕಾರ್ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯ. ಮಂಜುನಾಥ ಕುನ್ನೂರ್ ಅವರು ಬಹಳಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಶಿಗ್ಗಾವ್‌ನಲ್ಲಿ ಕಿವುಡ ಹಾಗೂ ಮೂಕ ವಿದ್ಯಾರ್ಥಿಗಳಿಗೆ ಶಾಲೆ ತೆರೆದಿರುವುದು ಪ್ರಶಂಸನೀಯ ಎಂದರು.
ಬಾಸೂರು ಶ್ರೀ ವೃಷಭೇಂದ್ರ ಸ್ವಾಮಿ, ಮುಖ್ಯಶಿಕ್ಷಕ ಕೆ.ಕೆ.ಎಲ್ಲಪ್ಪ ನೇಹಲ್, ಸೇಜಲ್, ಬಸವರಾಜ್, ಕಾಂತಪ್ಪ, ಶಿಾನ್, ಕಿರಣ್ ಕುಮಾರ್, ವಿ.ಕೆ.ಶ್ರುತಿ, ಜ್ಯೋತಿ, ಎಸ್.ಎಂ.ವಿದ್ಯಾ ಇತರರಿದ್ದರು.