ಅಂಬೇಡ್ಕರ್ ಭವನದಲ್ಲಿ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಿದರು. ಎಚ್.ಎಸ್.ಸುಂದರೇಶ್, ಎನ್.ಹೇಮಂತ್, ಎಸ್.ಆರ್.ಮಂಜುನಾಥ್, ರಮೇಶ್, ಶ್ರೀಕಾಂತ್ ಬರುವೆ, ಗಿರೀಶ್, ಎನ್.ಬಿ.ಮಂಜುನಾಥ್,ಬಿ.ಎನ್.ಕೃಷ್ಣಮೂರ್ತಿ, ಜಗದೀಶ್ ಸಂಪಳ್ಳಿ, ಡಾ. ಎಚ್.ಪಿ.ಇರ್ಫಾನ್ ಅಹಮದ್ ಇದ್ದರು.
- ಅಂಬೇಡ್ಕರ್ ಭವನದಲ್ಲಿ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಾಗಾರ
- ಕಾರ್ಯಾಗಾರಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಳ ಜತೆಗೆ ಪರೀಕ್ಷೆ ಭಯ ದೂರ
- ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿಕೆ
ಶಿವಮೊಗ್ಗ: ಪರೀಕ್ಷಾ(Exam)ಸಮಯದಲ್ಲಿ ಮಕ್ಕಳು ಜಾಗೃತರಾಗಿರಬೇಕು. ತಾಳ್ಮೆಯಿಂದ ಓದಬೇಕು. ಶ್ರದ್ಧೆ, ಶಿಸ್ತು ಮತ್ತು ಸಂವಹನ(Communication)ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಶನಿವಾರ ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ನಿಂದ ಎಸ್‌ಎಸ್‌ಎಲ್‌ಸಿ(Sslc)ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ, ಕಾರ್ಯಾಗಾರ(Workshop)ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಾಗಾರಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಪರೀಕ್ಷೆ ಭಯ ದೂರವಾಗಿಸುತ್ತವೆ. ಪರೀಕ್ಷೆಗಾಗಿ ಓದುವುದರ ಜತೆಗೆ ಇತೆ ಪುಸ್ತಕಗಳನ್ನೂ ಸ್ವಲ್ಪ ಓದಬೇಕು ಎಂದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 4 ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ. ಆ ಎಲ್ಲ ಪ್ರಶ್ನೆಪತ್ರಿಕೆಗಳಿಗೂ ಉತ್ತರ ಬರೆಯಬೇಕು. ಜತೆಗೆ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸಬೇಕು. ಮಾದರಿ(Model) ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಗಳು ಬಿಟ್ಟು ಬೇರೆ ಬರಲು ಸಾಧ್ಯವೇ ಇಲ್ಲ. ಪರೀಕ್ಷೆ ಸಮಯದಲ್ಲಿ ಕಡಿಮೆ ಓದಿ, ಹೆಚ್ಚು ರಿವಿಜನ್ ಮಾಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಶಿವಮೊಗ್ಗದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೇವೆ ಮೂಲಕ ನಿರ್ಮಿಸಬೇಕು ಎಂಬುದು ಟ್ರಸ್ಟ್‌ನ ಕನಸಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಆರ್.ಎ.ಚೇತನ್‌ರಾಮ್, ಸುರೇಶ್ ಕುಲಕರ್ಣಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಡಿಡಿಪಿಐ ಎಸ್.ಆರ್.ಮಂಜುನಾಥ್, ಬಿಇಒ ರಮೇಶ್, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್ ಬರುವೆ, ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಟ್ರಸ್ಟಿನ ಅಧ್ಯಕ್ಷ ಎನ್.ಬಿ.ಮಂಜುನಾಥ್, ಉಪಾಧ್ಯಕ್ಷ ಬಿ.ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಜಗದೀಶ್ ಸಂಪಳ್ಳಿ, ಜಂಟಿ ಕಾರ್ಯದರ್ಶಿ ಡಾ. ಎಚ್.ಪಿ.ಇರ್ಫಾನ್ ಅಹಮದ್, ನಿರ್ದೇಶಕರಾದ ಎಂ.ಪಿ.ದಿನೇಶ್‌ಪಟೇಲ್, ಚಂದನ್, ರಾಕೇಶ್‌ಗೌಡ, ಪಿ.ಎಸ್.ಗಿರೀಶ್‌ರಾವ್ ಮಾನೆ, ಪ್ರಮುಖರಾದ ರೂಪಾ ಪುಣ್ಯಕೋಟಿ, ರೇಣುಕಾರಾಧ್ಯ ಉಪಸ್ಥಿತರಿದ್ದರು.