ಸಿಸಿಎಫ್ ಕೆ.ಟಿ.ಹನುಮಂತಪ್ಪ 
ಶಿವಮೊಗ್ಗ

ಪಿಸಿಸಿಎಫ್‌ಗೆ ಸತ್ಯಶೋಧನಾ ವರದಿ ಸಲ್ಲಿಕೆ Jamboo Savari

ಶಿವಮೊಗ್ಗ: ದಸರಾ ಜಂಬೂ ಸವಾರಿ ವೇಳೆ ಸೋಮಣ್ಣ ಆನೆ ಗಾಬರಿಗೊಂಡು ಹಿಮ್ಮುಖವಾಗಿ ಓಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವಿಡಿಯೋ ಕ್ಲಿಪ್ಪಿಂಗ್‌ಗಳು, ಸಿಸಿಟಿವಿ ದೃಶ್ಯಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳ ಹೇಳಿಕೆ ಆಧರಿಸಿದ ಸತ್ಯಶೋಧನಾ ವರದಿ ಸಿದ್ಧಪಡಿಸಿ ಪಿಸಿಸಿಎಫ್(ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ)ಗೆ ಸಲ್ಲಿಸಲಾಗಿದೆ ಎಂದು ಸಿಸಿಎಫ್ ಕೆ.ಟಿ.ಹನುಮಂತಪ್ಪ ತಿಳಿಸಿದರು.

ಶಿವಮೊಗ್ಗ: ದಸರಾ ಜಂಬೂ ಸವಾರಿ ವೇಳೆ ಸೋಮಣ್ಣ ಆನೆ ಗಾಬರಿಗೊಂಡು ಹಿಮ್ಮುಖವಾಗಿ ಓಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವಿಡಿಯೋ ಕ್ಲಿಪ್ಪಿಂಗ್‌ಗಳು, ಸಿಸಿಟಿವಿ ದೃಶ್ಯಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳ ಹೇಳಿಕೆ ಆಧರಿಸಿದ ಸತ್ಯಶೋಧನಾ ವರದಿ ಸಿದ್ಧಪಡಿಸಿ ಪಿಸಿಸಿಎಫ್(ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ)ಗೆ ಸಲ್ಲಿಸಲಾಗಿದೆ ಎಂದು ಸಿಸಿಎಫ್ ಕೆ.ಟಿ.ಹನುಮಂತಪ್ಪ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳ ಆರೋಗ್ಯ, ತರಬೇತಿ, ಸಿದ್ಧತೆ, ಚಲನವಲನ, ಮಾರ್ಗದ ಮೇಲ್ವಿಚಾರಣೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ವಿವರ ಸಂಗ್ರಹಿಸಿ, ಅಗತ್ಯ ದಾಖಲೆಗಳೊಂದಿಗೆ ವರದಿಯನ್ನು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ ಎಂದರು.

ಅಂಬಾರಿ ಹೊರುವ ಆನೆಯ ಆಯ್ಕೆಗೆ ಸಂಬಂಧಿಸಿದಂತೆ ಸಾಗರ್ ಮತ್ತು ಸೋಮಣ್ಣ ಆನೆಗಳ ಸಿದ್ಧತೆಯನ್ನು ಸಮಗ್ರವಾಗಿ ಪರಿಶೀಲಿಸಲಾಗಿತ್ತು. ಎರಡೂ ಆನೆಗಳ ಸಿದ್ಧತೆ ಸಮಾನವಾಗಿದ್ದರೂ ತರಬೇತಿ ಅವಧಿಯಲ್ಲಿ ಸಾಗರ್ ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹದಾಯಕವಾಗಿರಲಿಲ್ಲ. ಅಲ್ಲದೆ, ಅದು ಸಂಪೂರ್ಣ ಆರಾಮದಾಯಕವಾಗಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಾಗರ್ ಆನೆಯ ಮಾವುತ ಇಮ್ತಿಯಾಜ್ ಅವರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ತರಬೇತಿ ಸಂದರ್ಭದಲ್ಲಿ ಆನೆಯ ವರ್ತನೆ ಹಾಗೂ ಅದರ ಅನುಕೂಲಕರ ಸ್ಥಿತಿಯನ್ನು ಪರಿಗಣಿಸಿದಾಗ ಸಾಗರ್‌ಗಿಂತ ಸೋಮಣ್ಣ ಅಂಬಾರಿ ಹೊರುವ ಕಾರ್ಯಕ್ಕೆ ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಮೂಡಿಬಂದಿತ್ತು ಎಂದರು.

ಅಂಬಾರಿ ಕಟ್ಟಿದ ಬಳಿಕ ಸೋಮಣ್ಣ ಅನೆಯ ಚಲನವಲನವು ಸರಿಯಾದ ರೀತಿಯಲ್ಲಿ ಸಾಗಿತ್ತು. ರಾಮಣ್ಣ ಶೆಟ್ಟಿ ಶ್ರೇಷ್ಠಿ ಪಾರ್ಕ್ ಸಮೀಪದವರೆಗೆ ಸುಮಾರು 800 ಮೀ. ಆನೆ ಸಹಜವಾಗಿ ನಡೆದಿತ್ತು. ಬಳಿಕವೂ ಯಾವುದೇ ತೊಂದರೆಯಿಲ್ಲದೆ ಸಾವಧಾನವಾಗಿ ಮುಂದುವರಿದಿತ್ತು. ಆನೆಗಳ ಕಾಲುಗಳ ಚಲನೆ ನಿಧಾನವಾಗಿದ್ದರೂ ಅವುಗಳ ದೇಹದ ಚಲನೆ ಮತ್ತು ವರ್ತನೆಯಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆನೆಗಳು ಕೆಲವೊಮ್ಮೆ ಏಕಾಏಕಿ ಬಾಲವನ್ನು ಎತ್ತುವ ಮೂಲಕ ಉದ್ರೇಕಗೊಂಡ ಸ್ಥಿತಿ ತೋರುತ್ತವೆ. ಇಂತಹ ಸಂದರ್ಭಗಳು ಅವುಗಳ ವರ್ತನೆಯಲ್ಲಿ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ಹಾಗೂ ಏಕಾಗ್ರತೆಯಿಂದ ಕಾರ್ಯನಿರ್ವಹಿಸಬೇಕು ಎಂಬುದನ್ನು ವರದಿಯಲ್ಲಿ ಒತ್ತಿಹೇಳಲಾಗಿದೆ ಎಂದರು.

ಸರ್ಕಾರದ ಮಾರ್ಗಸೂಚಿಗಳು ಮತ್ತು ಅನುಮತಿಯ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬುದರ ಕುರಿತು ಸಂಪೂರ್ಣ ದಾಖಲೆ ಸಿದ್ಧಪಡಿಸಲಾಗಿದೆ. ವನ್ಯಜೀವಿ ಇಲಾಖೆಯ ವರದಿ ಸೇರಿ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು ಮತ್ತು ಇತರ ಸಾಕ್ಷ್ಯಗಳನ್ನು ಒಟ್ಟುಗೂಡಿಸಿ ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ.
ಕೆ.ಟಿ.ಹನುಮಂತಪ್ಪ, ಶಿವಮೊಗ್ಗ ಸಿಸಿಎಫ್