ಹೊಸನಗರದ ಬಾಳೆಕೊಪ್ಪದಲ್ಲಿ ಆಯೋಜಿಸಿದ್ದ ಕೃಷಿ ನಡಿಗೆಯಲ್ಲಿ ಭಾಗವಹಿಸಿದ್ದ ನೂಲಿಗ್ಗೇರಿ ಸರ್ಕಾರಿ ಶಾಲೆ ಮಕ್ಕಳು. 
ಶಿವಮೊಗ್ಗ

ನೂಲಿಗ್ಗೇರಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ನಡಿಗೆ

ಸೋಮಶೇಖರ ಎನ್
ಹೊಸನಗರ: ನೂಲಿಗ್ಗೇರಿ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಕೃಷಿ ನಡಿಗೆಯಲ್ಲಿ ಪಾಲ್ಗೊಂಡು ಪರಿಸರದ ವೈವಿಧ್ಯ ಸಂಗತಿಗಳ ಬಗ್ಗೆ ಅರಿತು ಅಚ್ಚರಿ ವ್ಯಕ್ತಪಡಿಸಿದರು.
ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿ ಬಾಳೆಕೊಪ್ಪ ಸುಬ್ರಹ್ಮಣ್ಯ ಅವರ ಕೃಷಿ ಜಮೀನಿನಲ್ಲಿ ವಿವಿಧ ವಿಷಯಗಳ ಮಾಹಿತಿ ನೀಡಲಾಯಿತು. ಮಕ್ಕಳನ್ನು ಅಡಕೆ, ಬಾಳೆ, ತೆಂಗಿನ ತೋಟಗಳಿಗೆ ಕರೆದೊಯ್ದು ಅಗತ್ಯ ಮಾಹಿತಿ ಒದಗಿಸಲಾಯಿತು. ಶುಂಠಿ ಕೀಳುವ ಬಗ್ಗೆ, ಭತ್ತದ ಗದ್ದೆ ನಾಟಿ, ದಾಲ್ಚಿನಿ, ಕಾಳುಮೆಣಸು ಸೇರಿ ಉಪಬೆಳೆಯ ಆರ್ಥಿಕ ಲಾಭದ ಬಗ್ಗೆ ವಿವರಿಸಲಾಯಿತು.
ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ಮಾತನಾಡಿ, ಮಕ್ಕಳಿಗೆ ಕೃಷಿ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮುಖ್ಯಶಿಕ್ಷಕಿ ಪ್ರಮೀಳಾ ಮಾತನಾಡಿ, ಮಕ್ಕಳಿಗೆ ಹೊರಜಗತ್ತಿನ ಮಾಹಿತಿ ನೀಡಲು ಇಕೋ ಕ್ಲಬ್ ಮೂಲಕ ಪ್ರಕೃತಿ ನಡಿಗೆ ಆಯೋಜಿಸಿದ್ದು ಪ್ರಾತ್ಯಕ್ಷಿಕೆ ಮೂಲಕ ವಿವಿಧ ಬೆಳೆ, ನೀರಿನ ಹರಿವು, ತರಕಾರಿ, ಉಪಬೆಳೆಗಳ ಬಗ್ಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ಮಕ್ಕಳಿಗೆ ಕಬ್ಬಿನ ಹಾಲು ವಿತರಿಸಲಾಯಿತು. ಬಾಬು, ವೆಂಕಟರಮಣ, ನಟರಾಜ್, ಎಚ್.ಎಸ್.ಆಶಿಕ್, ಮಂಜುನಾಥ್, ಫರಿದಾ, ಜ್ಯೋತಿ, ಮೀನಾಕ್ಷಿ, ಪ್ರಣತಿ ಮಧುಕರ ಶೆಟ್ಟಿ ಇತರರಿದ್ದರು.