ಸೊರಬ ಮುರುಘಾ ಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಟನೆ ವೇದಿಕೆಯಿಂದ ಜಡೆ ಶ್ರೀಗಳನ್ನು ಗೌರವಿಸಲಾಯಿತು. ರೇಖಾ ಜಗದೀಶ್​, ನಾಗರಾಜ್​ ಗೌಡ, ದೇಸಾಯಿ ಗೌಡ, ಮಹೇಶ್​ ಪಾಟೀಲ್​ ಜಡೆ, ಸಂದೀಪ್​ ಗೌಡ ಇತರರಿದ್ದರು. 
ಶಿವಮೊಗ್ಗ

ಬಾಂಧವ್ಯ ವೃದ್ಧಿ ನೂಲ ಹುಣ್ಣಿಮೆ ವಿಶೇಷ

ಪ್ರಮುಖ ಮುಖ್ಯಾಂಶಗಳು

  • ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಅಭಿಮತ
  • ಬಾಂಧವ್ಯ ವೃದ್ಧಿ ನೂಲ ಹುಣ್ಣಿಮೆ ವಿಶೇಷ
  • ಮಾಸಿಕ ಶಿವಾನುಭವ ಕಾರ್ಯಕ್ರಮ
ಸೊರಬ: ಸಮಾಜ, ಕುಟುಂಬದ ನಡುವೆ ಬಾಂಧವ್ಯ ಗಟ್ಟಿಗೊಳಿಸುವುದೇ ನೂಲ ಹುಣ್ಣಿಮೆ ವಿಶೇಷ. ಆಚರಣೆಗಳಲ್ಲಿ ತಾಯಂದಿರಿಗೆ ಬಹಳ ಪವಿತ್ರವಾದ ಸ್ಥಾನ ನೀಡಲಾಗಿದೆ. ಋಷಿಮುನಿಗಳ ಕಾಲದಿಂದಲೂ ತಾಯಿಯ ಸ್ಥಾನಕ್ಕೆ ಇತಿಹಾಸವಿದೆ ಎಂದು ಜಡೆ ಸಂಸ್ಥಾನ ಮತ್ತು ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಸೊರಬ ಪಟ್ಟಣದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಹಿಳೆಯನ್ನು ಗೌರವದಿಂದ ಕಂಡರೆ ಸಮಾಜ ಪಾರಂಪರಿಕವಾಗಿ ಶ್ರೀಮಂತವಾಗಲು ಸಾಧ್ಯ ಎಂದರು.
ಇಂದು ಹಬ್ಬಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಆಚರಣೆಗೆ ತಂದಿದ್ದಾರೆ. ಸಾಮಾನ್ಯ ಮನುಷ್ಯ ಲೌಕಿಕವಾಗಿ ಯೋಚಿಸುತ್ತಾನೆ. ಆದರೆ ಕೆಲವು ದಾರ್ಶನಿಕರು, ಶ್ರೀಗಳು ಲೋಕಕಲ್ಯಾಣಕ್ಕಾಗಿ ಜನಿಸಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರಲ್ಲಿ ನಾರಾಯಣ ಗುರು ಸಹ ಒಬ್ಬರು ಎಂದರು.
ತಾಲೂಕು ಅಕ್ಕನ ಬಳಗದ ಅಧ್ಯೆ ರೇಖಾ ಜಗದೀಶ್​, ವೀರಶೈವ ಲಿಂಗಾಯತ ಸಹಕಾರ ಪತ್ತಿನ ಸಹಕಾರ ಸಂದ ಉಪಾಧ್ಯಕ್ಷ ನಾಗರಾಜ್​ ಗೌಡ, ವೀರಶೈವ ಲಿಂಗಾಯತ ಸಂಟನಾ ವೇದಿಕೆ ಅಧ್ಯಕ್ಷ ದೇಸಾಯಿ ಗೌಡ, ಮಹೇಶ್​ ಪಾಟೀಲ್​, ಸಂದೀಪ್​ ಗೌಡ, ಮಲ್ಲಿಕಾರ್ಜುನ ಗೌಡ, ಬಸವರಾಜ್​ ಗೌಡ, ಡಿ.ಶಿವಯೋಗಿ ಇತರರಿದ್ದರು.