ಸೋಮಿನಕೊಪ್ಪ ಬಡಾವಣೆಯಲ್ಲಿ ಬೀದಿ ನಾಯಿ ಬೀದಿ ನಾಯಿ ದಾಳಿಗೆ ತುತ್ತಾದವರು.
- ಮಹಾನಗರ ಪಾಲಿಕೆ ವ್ಯಾಪ್ತಿಯ ಸೋಮಿನಕೊಪ್ಪ ಬಡಾವಣೆಯಲ್ಲಿ ಘಟನೆ
- 4 ವರ್ಷದ ಇರ್ಜಾ ಕೌನೇನ್ ಹಾಗೂ ಕೃಷ್ಣಾನಾಯ್ಕ್ ಬೀದಿ ನಾಯಿ ದಾಳಿಗೆ ತುತ್ತಾದವರು
- ಬಡಾವಣೆ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ವಿಪರೀತ, ನಿಯಂತ್ರಣಕ್ಕೆ ಸ್ಥಳೀಯರ ಒತ್ತಾಯ
ಶಿವಮೊಗ್ಗ: ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕಿ ಹಾಗೂ ಪಾದಚಾರಿ ಮೇಲೆ ಬೀದಿ ನಾಯಿ(Street dog)ಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.
4 ವರ್ಷದ ಇರ್ಜಾ ಕೌನೇನ್ ಹಾಗೂ ಕೃಷ್ಣಾನಾಯ್ಕ್ ಬೀದಿ ನಾಯಿ ದಾಳಿಗೆ ತುತ್ತಾದವರು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆ(Private hospital)ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬುಧವಾರ ಸಂಜೆ ಬಾಲಕಿ ಮೇಲೆ ನಾಯಿ ದಾಳಿ ನಡೆಸಿ ಐದಾರು ಕಡೆ ಕಚ್ಚಿದೆ. ಬಾಲಕಿಯ ಕಿರುಚಾಟ ಗಮನಿಸಿ ನೆರೆಹೊರೆಯವರು ನಾಯಿಯನ್ನು ಓಡಿಸಿದ್ದಾರೆ.
ಗುರುವಾರ ಬೆಳಗ್ಗೆ ರಸ್ತೆಯಲ್ಲಿ ಹೋಗುತ್ತಿದ್ದ ಕೃಷ್ಣ ನಾಯ್ಕ್ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ಹಾಗೆಯೇ ಕರುವೊಂದರ ಮೇಲೆಯೂ ದಾಳಿ ನಡೆಸಿದೆ. ಸೋಮಿನಕೊಪ್ಪ(Sominakoppa) ಬಡಾವಣೆ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ತಕ್ಷಣವೇ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.