ಭದ್ರಾ ನದಿಗೆ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪೌರಾಯುಕ್ತ ಕೆ.ಎನ್.ಹೇಮಂತ್ ಅವರಿಗೆ ಭದ್ರಾ ನದಿ ಸಂರಕ್ಷಾ ಪಡೆಯ ತೀರ್ಥೇಶ್, ನಾಗರಾಜ್, ಹರೀಶ್, ಜಯಣ್ಣ ಇತರರು ಮನವಿ ಸಲ್ಲಿಸಿದರು. 
ಶಿವಮೊಗ್ಗ

ಭದ್ರಾ ನದಿ ಮಾಲಿನ್ಯ ತಡೆಯಿರಿ | Bhadra river

ಶಿವಕುಮಾರ ಎಸ್.ಪಿ.
ಭದ್ರಾವತಿ: ನಗರದ ಹರಿಯುತ್ತಿರುವ ಭದ್ರಾ ನದಿಗೆ ತ್ಯಾಜ್ಯ ಎಸೆಯುತ್ತಿದ್ದು, ನದಿ ಮಲಿನವಾಗುತ್ತಿದೆ. ಕಸ ಎಸೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಭದ್ರಾ ನದಿ ಸಂರಕ್ಷಣಾ ಪಡೆ ನಗರಸಭೆ ಪೌರಾಯುಕ್ತ ಕೆ.ಎನ್.ಹೇಮಂತ್‌ಗೆ ಮನವಿ ಸಲ್ಲಿಸಲಾಯಿತು.
ನದಿಗೆ ಕೆಲ ಅನಾಗರಿಕರು ಸೇತುವೆ ಮೇಲಿಂದ ವಿವಿಧ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಜಲಚರಗಳ ಜೀವಕ್ಕೆ ಆಪತ್ತು ಎದುರಾಗಿದೆ. ಘನತ್ಯಾಜ್ಯ ನಿರ್ವಹಣೆ-2016ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರಗಳಲ್ಲಿ ಕಸ ಎಸೆಯುವುದನ್ನು ನಿರ್ಬಂಧಿಸಲಾಗಿದೆ. ಕೂಡಲೆ ಭದ್ರಾ ನದಿಯ ಮಾಲಿನ್ಯ ತಡೆಯಬೇಕು. ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಭದ್ರಾ ನದಿ ಸಂರಕ್ಷಣಾ ಪಡೆಯ ಮುಖಂಡ ತೀರ್ಥೇಶ್, ಡಿಎಸ್‌ಎಸ್ ಮುಖಂಡ ನಾಗರಾಜ್, ಹರೀಶ್, ಜಯಣ್ಣ, ರೈತ ಮುಖಂಡ ಇಮ್ರಾನ್ ಪಾಷಾ, ಕಾರ್ತಿಕ್ ಕಿದ್ವಯ್ ಇತರರಿದ್ದರು.