ಬಜರಂಗದಳದ ಪ್ರಾಂತ್ಯ ಸುರಕ್ಷಾ ಪ್ರಮುಖ್ ರಾಜೇಶ್ ಗೌಡ ಮಾತನಾಡಿದರು. ವಿಶ್ವ ಹಿಂದೂ ಪರಿಷದ್ ಪ್ರಮುಖ್ ರಮೇಶ್ ಬಾಬು ಜಾಧವ್, ಮಾತೃ ಶಕ್ತಿ ಪ್ರಮುಖ್ ಶಕುಂತಲಾ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

ಗೋವುಗಳ ಅಕ್ರಮ ಸಾಗಣೆ, ಹತ್ಯೆ ತಡೆಯಿರಿ | Bajrang Dal

ಪ್ರಮುಖ ಮುಖ್ಯಾಂಶಗಳು

  • ಬ್ರಕೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ
  • ರಾಜ್ಯಾದ್ಯಂತ ಚೆಕ್‌ಪೋಸ್ಟ್‌ ನಿರ್ಮಿಸಿ
  • ಬಜರಂಗದಳ ಮುಖಂಡ ರಾಜೇಶ್ ಗೌಡ ಒತ್ತಾಯ
ಶಿವಮೊಗ್ಗ: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ಗೋಹತ್ಯೆ ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ(Bajrang Dal) ದ ಪ್ರಾಂತ್ಯ ಸುರಕ್ಷಾ ಪ್ರಮುಖ್ ರಾಜೇಶ್ ಗೌಡ ಒತ್ತಾಯಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಚೆಕ್‌ಪೋಸ್ಟ್‌(Check Post)ಗಳನ್ನು ನಿರ್ಮಿಸಿ ಗೋವುಗಳ ಅಕ್ರಮ ಸಾಗಣೆ ತಡೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪಶುಪಾಲನಾ ಇಲಾಖೆ(Animal Husbandry Department) ಜಿಲ್ಲೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಜಾನುವಾರುಗಳ ಗಣತಿ ಮಾಡಬೇಕು. ಗಣತಿ ಮಾಡಿದ ನಂತರ ಅವುಗಳ ಕಿವಿಗೆ ಟ್ಯಾಗ್ ಅಳವಡಿಸಬೇಕು. ಯಾರ ಮನೆಯ ಮುಂಭಾಗದಲ್ಲಿ ಹಸುಗಳನ್ನು ಕಟ್ಟಲಾಗಿದೆಯೋ ಅವು ಬಕ್ರೀದ್ ಹಬ್ಬ(Bakrid Festival)ದ ನಂತರವೂ ಅಲ್ಲಿಯೇ ಇವೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಹಸು ಇಲ್ಲ, ಅದನ್ನು ನಾವು ಮಾರಾಟ ಮಾಡಿದ್ದೇವೆ ಎಂದು ಹೇಳಿದರೆ ಅದನ್ನು ಕೊಂಡವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವಿಚಾರಣೆ ನಡೆಸಬೇಕು. ಇದೇನಾದರೂ ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಾತೃ ಶಕ್ತಿ ಪ್ರಮುಖ್ ಶಕುಂತಲಾ, ಬಜರಂಗ ದಳದ ಜಿಲ್ಲಾ ಸಂಯೋಜಕ್ ವಡಿವೇಲು ರಾಘವನ್, ಬಜರಂಗ ದಳದ ಸುರೇಶ್ ಬಾಬು, ಸಹ ಸಂಯೋಜಕರಾದ ಅಂಕಶ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.
"

ಕಳೆದ ನಾಲ್ಕು ದಿನಗಳಲ್ಲಿ ವಿಎಚ್‌ಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹಸುಗಳನ್ನು ರಕ್ಷಣೆ ಮಾಡಿದ್ದು, ಇದುವರೆಗೂ ಹಸುಗಳನ್ನೇ ಸಾಕದವರ ಮನೆಯ ಎದುರು ಈಗ 4ರಿಂದ 5 ಹಸುಗಳನ್ನು ತಂದು ಕಟ್ಟಲಾಗಿದೆ. ಅವುಗಳನ್ನು ಅಲ್ಲಿ ಕಟ್ಟಲು ಕಾರಣವೇನು ಎಂಬುದನ್ನು ಸಂಬಂಧಿಸಿದವರು ಸ್ಪಷ್ಟಪಡಿಸಬೇಕು.

— ರಾಜೇಶ್ ಗೌಡ, ಬಜರಂಗದಳದ ಪ್ರಾಂತ್ಯ ಸುರಕ್ಷಾ ಪ್ರಮುಖ್