ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  
ಶಿವಮೊಗ್ಗ

ರಾಜಕೀಯ ಲಾಭಕ್ಕಾಗಿ ‘ಸ್ಟಿಂಗ್ ಆಪರೇಷನ್’ Sting Operation

ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿವಿಧ ಷಡ್ಯಂತ್ರಗಳ ಮೂಲಕ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಸಿಎಂ ಕುರ್ಚಿ ಹಿಡಿದಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ‘ಸ್ಟಿಂಗ್ ಆಪರೇಷನ್’ ನಡೆಸುವ ಮಟ್ಟಕ್ಕೆ ರಾಜ್ಯ ರಾಜಕಾರಣ ಇಳಿದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆ ಕಲೆ, ಬುದ್ಧಿವಂತರು ಹಾಗೂ ಐಟಿ-ಬಿಟಿ ನಾಡೆಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದ ಕರ್ನಾಟಕವನ್ನು ಇಂದು ‘ಸ್ಟಿಂಗ್ ಆಪರೇಷನ್‌ಗಳ ನಾಡು’ ಎಂದು ಇತರ ರಾಜ್ಯಗಳು ಕೇಳುವ ಸ್ಥಿತಿಗೆ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ಕಿಡಿಕಾರಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ತಕ್ಷಣವೇ ಬ್ಲ್ಯಾಕ್‌ಮೇಲ್ ರಾಜಕಾರಣ ನಿಲ್ಲಿಸಬೇಕು. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಮೊದಲು ರಾಜ್ಯದ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸರಿಪಡಿಸಿ, ಆಮೇಲೆ ನಮ್ಮನ್ನು ಜೈಲಿಗೆ ಹಾಕಿ. ಕಾನೂನು ಸುವ್ಯವಸ್ಥೆ ಸರಿಪಡಿಸಿ ನಂತರ ನಮ್ಮನ್ನು ಜೈಲಿಗೆ ಕಳಿಸಿ ಎಂದು ಸಲಹೆ ನೀಡಿದರು.

ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಟಾಂಗ್ ನೀಡಿ ಸಂಸತ್ತಿನಲ್ಲಿ ಚರ್ಚೆ ಮಾಡಲು ಧೈರ್ಯವಿಲ್ಲದೆ ಓಡಿಹೋದ ರಾಹುಲ್ ಗಾಂಧಿ, ಮೊದಲು ಸಂಸತ್ತಿಗೆ ಬಂದು ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು. ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಬರ್ಬಾದ್ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು.