ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ 
ಶಿವಮೊಗ್ಗ

ಆಡಳಿತ ವೈಫಲ್ಯದಿಂದ ರಾಜ್ಯ ದಿವಾಳಿ | K.S.Eshwarappa

ಶಿವಮೊಗ್ಗ: ಕಾಂಗ್ರೆಸ್(Congress) ಆಡಳಿತ ವೈಫಲ್ಯದಿಂದ ರಾಜ್ಯ ದಿವಾಳಿಯಾಗಿದೆ. ಗುತ್ತಿಗೆದಾರರ 37 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ನಿಸ್ಸಹಾಯಕರಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ(K.S.Eshwarappa) ಟೀಕಿಸಿದರು. 
ನಗರಾಭಿವೃದ್ಧಿ, ಕಾರ್ಮಿಕ ಇಲಾಖೆ, ಪಿಡಬ್ಲ್ಯೂಡಿ(Pwd)ಸೇರಿ ಹಲವು ಇಲಾಖೆಯಿಂದ ಬಿಲ್(Bill) ಬಾಕಿ ಇದೆ. ಗುಂಪು ಟೆಂಡರ್ ಕರೆಯುವ ಮೊದಲು ಆಯಾ ಜಿಲ್ಲೆಯಲ್ಲಿ ಗುತ್ತಿಗೆದಾರರು(Contractors) ಭಾಗಿಯಾಗುವಂತೆ ಟೆಂಡರ್ ಕರೆಯಬೇಕಿದೆ. ಹಿಂದಿನ ಸರ್ಕಾರದಲ್ಲಿ ಕಮೀಷನ್ ಹಾವಳಿ ಹೆಚ್ಚಾಗಿತ್ತು ಎಂದು ಸಿಎಂ ಪದೇಪದೆ ಹೇಳುತ್ತಿದ್ದರು. ಇದಕ್ಕಾಗಿ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಿ ವರದಿ ತರೆಸಿಕೊಂಡಿತ್ತು. ಸಮಿತಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದೆ. ಇದೀಗ ರಾಜ್ಯದಲ್ಲಿ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದು, ರಾಷ್ಟ್ರಭಕ್ತರ ಬಳಗ(rashtrabhaktara balaga) ಬೆಂಬಲಿಸುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಆಶ್ರಯ ಮನೆ ಕಟ್ಟಿದ ಗುತ್ತಿಗೆದಾರ ಊರು ಬಿಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹಾಯಕ್ಕೆ ಬರಬೇಕಿದೆ. ಮನೆಗಳ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ನಡೆಸಿತ್ತು. ಅದರ ಮುಂದುವರಿದ ಭಾಗವಾಗಿ ಹೊನ್ನಾವರ, ಕುಮಟಾ, ಶಿರಸಿ, ಸಾಗರದ ಪರಿಸರಾಸಕ್ತರ ಪೂರ್ವಭಾವಿ ಸಭೆಯನ್ನು ಸಾಗರದಲ್ಲಿ ನಡೆಸಲಾಗುತ್ತಿದೆ ಎಂದರು.