ಭದ್ರಾವತಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ. ಜಿ.ರಮಾಕಾಂತ್, ಮಂಜುನಾಥ್ ಇತರರಿದ್ದರು. 
ಶಿವಮೊಗ್ಗ

ದೇವಾಲಯಕ್ಕೆ ಶೃಂಗೇರಿ ಶ್ರೀ ಭೇಟಿ | vidhushekhara shree

ಭದ್ರಾವತಿ: ನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಗುರುವಾರ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯದ ಅರ್ಚಕರು ಹಾಗೂ ಭಕ್ತರು ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಶರ್ಮ ಹಾಗೂ ಸಹಾಯಕ ಶ್ರೀನಿವಾಸ್ ದೇವಸ್ಥಾನದ ಇತಿಹಾಸವನ್ನು ಪರಿಚಯ ಮಾಡಿಕೊಟ್ಟರು. ಮಹಾಮಂಗಳಾರತಿಯೊಂದಿಗೆ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಜಿ.ರಮಾಕಾಂತ್, ಮಂಜುನಾಥ್, ಸತೀಶ್ ಅಯ್ಯರ್, ಹಾಲಮ್ಮ. ಪರಶುರಾಮ್, ಶಿವಾನಂದ್ ಇತರರಿದ್ದರು.