ಸೊರಬದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮ ಅವರ ಜಯಂತ್ಯುತ್ಸವದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಭೋವಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುರೇಶ್ ಹಾವಣ್ಣನವರ್, ಮಂಜುಳಾ ಹೆಗಡಾಳ್, ರವಿ ಕಲ್ಲಂಬಿ ಇತರರಿದ್ದರು. 
ಶಿವಮೊಗ್ಗ

ಶೋಷಿತರ ಸಾಂಸ್ಕೃತಿಕ ನಾಯಕ ಶ್ರೀ ಸಿದ್ದರಾಮ | lecturing

ಸೊರಬ: ವಚನಕಾರರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಶಿವಯೋಗಿ ಸಿದ್ದರಾಮ ಅವರು ತಳ ಸಮುದಾಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಹಾಗೂ ತಾಲೂಕು ಭೋವಿ ಸಮಾಜದಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಶ್ರೀ ಸಿದ್ದರಾಮರು ಬಾಲಕನಾಗಿದ್ದಾಗ ಮಾತು ಬರುತ್ತಿರಲಿಲ್ಲ. ಒಮ್ಮೆ ದನ ಕಾಯುವಾಗ ಸ್ವಾಮೀಜಿಯೊಬ್ಬರು ಬಂದು ನನಗೆ ಹಸಿವಾಗಿದೆ. ಮೊಸರು ಬುತ್ತಿ ತರುವಂತೆ ಹೇಳುತ್ತಾರೆ. ಮನೆಗೆ ಬಂದು ತಾಯಿಗೆ ಮೊಸರು ಬುತ್ತಿ ಕೊಡುವಂತೆ ಹೇಳಿದಾಗ ಮಗನಿಗೆ ಮಾತು ಬಂದಿರುವುದನ್ನು ನೋಡಿದ ತಾಯಿ ಆಶ್ಚರ್ಯಗೊಂಡು ಸಂತೋಷಪಟ್ಟರು. ಬಾಲಕ ಸಿದ್ದರಾಮ ತಾಯಿ ಜತೆಗೆ ಬುತ್ತಿ ತರಲು ಹೇಳಿದ ಸ್ವಾಮೀಜಿ ಮಲ್ಲಯ್ಯನನ್ನು ಹುಡುಕತ್ತ ಶ್ರೀಶೈಲಕ್ಕೆ ಹೋದರೂ ಸಿಗದಿದ್ದಾಗ ಸೊನ್ನಲಗಿಗೆ ಹೋಗಿ ತಪಸ್ಸು ಮಾಡಿ. ಅಲ್ಲಿಯ ಜನರೊಂದಿಗೆ ಕೆರೆ ನಿರ್ಮಾಣದಲ್ಲಿ ಪಾಲ್ಗೊಂಡು ಶ್ರಮಜೀವಿ, ಕಾಯಕಯೋಗಿ ಎನಿಸಿಕೊಳ್ಳುತ್ತಾರೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಮಾತನಾಡಿ, ನಮ್ಮ ಸಮಾಜ ಕಲ್ಲು ಒಡೆಯುವ, ಗುಡಿ ಗುಂಡಾರಗಳನ್ನು, ಕೆರೆ ನಿರ್ಮಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಆದರೆ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯ ಜಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಮಂಜುಳಾ ಹೆಗಡಾಳ್, ಸಹಾಯಕ ಕೃಷಿ ನಿರ್ದೇಶಕ  ಕೆ.ಜಿ.ಕುಮಾರ್, ಎಪಿಎಂಸಿ ಕಾರ್ಯದರ್ಶಿ ಆಶಾ, ಪಶು ವೈದ್ಯಾಧಿಕಾರಿ ಪ್ರದೀಪಕುಮಾರ್, ನಾಗರತ್ನ, ಅರಣ್ಯಾಧಿಕಾರಿ ಜಗದೀಶ್, ಬದರೀಶ್, ಆರೋಗ್ಯ ಇಲಾಖೆಯ ಅಶೋಕ್, ಅಬಕಾರಿ ಇಲಾಖೆಯ ಬಾಲಚಂದ್ರ ಇತರರಿದ್ದರು.