ರೇವಣಸಿದ್ದೇಶ್ವರ ಶ್ರೀ 
ಶಿವಮೊಗ್ಗ

17ರಂದು ದುಗ್ಲಿಯಲ್ಲಿ ಶ್ರೀ ರೇವಣಸಿದ್ದೇಶ್ವರ ರಥೋತ್ಸವ | Religious

ಸೊರಬ: ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ತಾಲೂಕಿನ ಶ್ರೀ ರಂಭಾಪುರಿ ಶಾಖೆ ಶ್ರೀ ಗುರು ರೇವಣಸಿದ್ದೇಶ್ವರ ಮಠದಲ್ಲಿ ಮಾ.17ರಂದು ಶ್ರೀ ರೇವಣಸಿದ್ಧೇಶ್ವರ ರಥೋತ್ಸವ, ಮಠದ 51ನೇ ವಾರ್ಷಿಕೋತ್ಸವ, ಮಠದ ಸಂಸ್ಥಾಪಕರಾದ ಲಿಂ. ಮುರುೇಂದ್ರ ಸ್ವಾಮಿಗಳ 7ನೇ ವರ್ಷದ ಪುಣ್ಯಸ್ಮರಣೆ, ಪ್ರಸ್ತುತ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಗುರು ರೇವಣಸಿದ್ದೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.
ಹೇಳಿಕೆ ನೀಡಿರುವ ಶ್ರೀಗಳು, ಅಂದು ಸಂಜೆ 5.30ಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ  ಜಾತ್ರಾ ಮಹೋತ್ಸವ ಮತ್ತು ಲಿಂಗೈಕ್ಯ ಪೂಜ್ಯರ ಪುಣ್ಯಸ್ಮರಣೆ ಧರ್ಮ ಸಮಾರಂಭ ಜರುಗಲಿದೆ. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ಸಮಾರಂಭ ಉದ್ಘಾಟಿಸುವರು. ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಲಿಂ.ಶ್ರೀಗಳ ಭಾವಚಿತ್ರ ಬಿಡುಗಡೆ ಮಾಡುವರು ಎಂದಿದ್ದಾರೆ.
ಕಾನುಗೋಡಿನ ಕೃಷ್ಣಮೂರ್ತಿ, ಓಂಕಾರಪ್ಪ, ಸೋಮಪ್ಪ, ಬಾಶಿಯ ಶಿವಪ್ಪ ಕೃಷ್ಣ ಬಡಿಗೇರ, ಸಂಗಪ್ಪ, ವನಮಾಲಾ ಶ್ರೀಪತಿ ಪತ್ರೆ, ಮಲ್ಲೇಶಪ್ಪ ಸುರಹೊನ್ನೆ, ಡಾ. ಶ್ರೀಧರ, ಡಾ. ಪ್ರಭು ಸಾಹುಕಾರ, ಲಿಂಗರಾಜ ಬಂಗಾರಪ್ಪ ಗೌಡ, ವಿನಯ ಪಾಟೀಲ್, ಶ್ರೀನಿವಾಸ ಹೆಬ್ಬಾರ್, ರೇಣುಕಮ್ಮ ಇವರಿಗೆ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಜಿ ಶಾಸಕ ವಿ.ಎಸ್.ಪಾಟೀಲ್, ಗಣಪತಿ ಹುಲ್ತಿಕೊಪ್ಪ, ಗುರುಕುಮಾರ ಪಾಟೀಲ, ಪ್ರಕಾಶ ಅಗಸನಹಳ್ಳಿ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಮಾ.16ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಸಂಜೆ ಕಲಶಾರಾಧನೆ, ಶ್ರೀ ದುರ್ಗಾ ಹೋಮ ಪೂರ್ಣಾಹುತಿ, ನಂತರ ಶಕ್ತಿಮಾತೆ ಶ್ರೀ ಚೌಡೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತದೆ. 17ರಂದು ಕ್ಷೇತ್ರದ ದೇವರುಗಳಿಗೆ ವಿಶೇಷ ಪೂಜೆ ಜರುಗುವುದು. ದುಗ್ಲಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಆಶ್ಲೇಷ ಬಲಿ, ಸರ್ಪಶಾಂತಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಲಿದೆ ಎಂದು ಹೇಳಿದ್ದಾರೆ.