ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದ ಪ್ರಾಂಗಣದಲ್ಲಿ ನೆರವೇರಿದ ಸ್ವಾಮಿ ಪಲ್ಲಕ್ಕಿ ಉತ್ಸವ. ಪ್ರಮೋದ್‌ಕುಮಾರ್, ಜಿ.ರಮಾಕಾಂತ್, ಗೋಪಾಲಕೃಷ್ಣ ಇತರರಿದ್ದರು. 
ಶಿವಮೊಗ್ಗ

ಶ್ರೀ ರಾಘವೇಂದ್ರ ಸ್ವಾಮಿ ಉತ್ಸವ | Religious programe

ಭದ್ರಾವತಿ: ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಮೂರನೇ ದಿನವಾದ ಸೋಮವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದ ಸುತ್ತಮತ್ತಲಿನ ರಸ್ತೆಗಳಲ್ಲಿ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ದೇವಾಲಯ ಪ್ರಾಂಗಣದಲ್ಲಿ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಥೋತ್ಸವದಲ್ಲಿ ನೂರಾರು ಸಂಖ್ಯೆಯ ಭಕ್ತರು ಸೇರಿದ್ದರು. ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಾನಾ ಬಗೆಯ ಹಣ್ಣುಗಳ ಹಾರ ಸಮರ್ಪಿಸಿದರು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಸೇವಾ ಸಮಿತಿ ಕಾರ್ಯದರ್ಶಿ ಜಿ.ರಮಾಕಾಂತ್, ಗುರುರಾಜಾಚಾರ್, ನಿರಂಜನಾಚಾರ್, ಗೋಪಾಲಾಚಾರ್, ಪ್ರಮೋದ್‌ಕುಮಾರ್ ಇತರರಿದ್ದರು.