ಶ್ರೀಲಂಕಾದ ಜಾಫ್ನಾ ಸಂಸದ ಶ್ರೀಧರನ್ ಅವರನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸನ್ಮಾನಿಸಿದರು. ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ ಇತರರಿದ್ದರು. 
ಶಿವಮೊಗ್ಗ

ಬಿವೈಆರ್ ನಿವಾಸಕ್ಕೆ ಶ್ರೀಲಂಕಾ ಸಂಸದರ ನಿಯೋಗ

ಶಿಕಾರಿಪುರ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಶ್ರೀಲಂಕಾದ ಜಾಫ್ನಾ ಮತ್ತು ಕಿಲಿನೊಚ್ಚಿ ಚುನಾವಣಾ ಜಿಲ್ಲೆಯ ಸಂಸದ ಶ್ರೀಧರನ್ ಶಿವಜ್ಞಾನಂ ಮತ್ತು ಅವರೊಂದಿಗೆ ನಿಯೋಗ ಭೇಟಿ ನೀಡಿ ಚರ್ಚೆ ನಡೆಸಿತು.
 ಭಾರತ ಮತ್ತು ಶ್ರೀಲಂಕಾ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯ, ಉಭಯ ದೇಶಗಳ ಪ್ರಚಲಿತ ರಾಜಕೀಯ ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿದ್ಯಮಾನಗಳು ಸೇರಿ ವಿವಿಧ ಆಸಕ್ತಿದಾಯಕ ವಿಷಯಗಳ ಕುರಿತು ಸೌಹಾರ್ದಯುತವಾಗಿ ಚರ್ಚೆ ನಡೆಸಿದರು. ಶ್ರೀಧರನ್ ಅವರನ್ನು ಬಿ.ವೈ.ರಾಘವೇಂದ್ರ ಸನ್ಮಾನಿಸಿದರು.
ಮಲೆನಾಡಿನ ಕೃಷಿ ಪದ್ಧತಿ, ಪ್ರವಾಸೋದ್ಯಮ ಹಾಗೂ ಇತಿಹಾಸ ಕುರಿತು ಶ್ರೀಧರನ್ ಮಾಹಿತಿ ಪಡೆದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಶ್ರೀಲಂಕಾದ ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.