ಕೃಷಿ ಮತ್ತು ತೋಟಗಾರಿಕೆ ವಿವಿ ವಿಶ್ರಾಂತ ಕುಲಸಚಿವ ಡಾ. ಶಶಿಧರ್ ಮಾತನಾಡಿದರು. ಎಚ್.ಎಂ.ಚಂದ್ರಶೇಖರಯ್ಯ, ರೇಣುಕಾರಾಧ್ಯ, ಕೆ.ಚಂದ್ರಪ್ಪ, ವಿ.ಎಂ.ಮಂಜುನಾಥ್, ಕೊಟ್ರೇಶ್, ನಿರಂಜನಸ್ವಾಮಿ, ಸುನೀಲ್ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

13ರಿಂದ ಮನೆ-ಮನಗಳಲ್ಲಿ ಶ್ರಾವಣ ಚಿಂತನ | Sravana chintana

ಪ್ರಮುಖ ಮುಖ್ಯಾಂಶಗಳು

  • ವಚನಗಳಲ್ಲಿ ಜೀವನ ಕೌಶಲ, ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆ
  • ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಸಾನ್ನಿಧ್ಯ
  • ಕೃಷಿ ಮತ್ತು ತೋಟಗಾರಿಕೆ ವಿವಿ ವಿಶ್ರಾಂತ ಕುಲಸಚಿವ ಡಾ. ಶಶಿಧರ್ ಮಾಹಿತಿ
ಶಿವಮೊಗ್ಗ: ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠ, ಶ್ರೀ ಮುರುಘರಾಜೇಂದ್ರ ಮಹಾ ಸಂಸ್ಥಾನದ ಮಠ ಟ್ರಸ್ಟ್ ಆಶ್ರಯದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಚಿಂತನ(Sravana chintana)-2026 ಕಾರ್ಯಕ್ರಮವನ್ನು ಆ.13ರಿಂದ ಸೆ.9ರವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ವಿಶ್ರಾಂತ ಕುಲಸಚಿವ ಡಾ. ಕೆ.ಸಿ.ಶಶಿಧರ್(Dr. K.C.Sashidhar) ಹೇಳಿದರು.
ವಚನಗಳಲ್ಲಿ ಜೀವನ ಕೌಶಲಗಳು, ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆ ಮತ್ತು ಮನೆ ಮನಗಳಲ್ಲಿ ಶರಣರ ಆಶಯಗಳನ್ನು ಮತ್ತು ಮೌಲಿಕ ಚಿಂತನೆಗಳನ್ನು ಮತ್ತೆ ಬೆಳೆಸುವ ಉದ್ದೇಶದಿಂದ ಕಳೆದ 49 ವರ್ಷಗಳಿಂದ ಶ್ರಾವಣ ಚಿಂತನವನ್ನು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ(Shri Mallikarjuna Murugarajendra Swamiji) ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಟುಂಬದಲ್ಲಿ ಸಾಮರಸ್ಯ ಕೊರತೆ, ವ್ಯಸನಗಳು ಹೆಚ್ಚುತ್ತಿರುವುದರಿಂದ ಜೀವನ ಕೌಶಲ ಮತ್ತು ಜೀವನ ಮೌಲ್ಯಗಳ ಕುರಿತು ಚಿಂತನೆ ಅಗತ್ಯವಾಗಿದೆ. ಶ್ರಾವಣ ಚಿಂತನ ವಚನಗಳಲ್ಲಿ ಜೀವನ ಕೌಶಲಗಳ ಕುರಿತು ಮೌಲಿಕ ಚಿಂತನಾ ವೇದಿಕೆಯಾಗಲಿ ಎನ್ನುವ ಆಶಯ ಹೊತ್ತು ಮನೆ-ಮನೆಗಳಲ್ಲಿ 30 ವಿಷಯ ತಜ್ಞರು ವಿಚಾರ ಮಂಡನೆ(Presentation of ideas) ಮಾಡಲಿದ್ದಾರೆ ಎಂದರು.
ನಿತ್ಯಮನೆ ಸಂಗೀತ, ಅಲ್ಲಮ ರಂಗ, ವಚನ, ರೂಪಕ, ಉಪನ್ಯಾಸ, ಸಂವಾದ ಮತ್ತು ಆಶೀರ್ವಚನ ನಡೆಯಲಿದೆ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆ.13ರಂದು ಸಂಜೆ 6.30ಕ್ಕೆ ಬೆಕ್ಕಿನ ಕಲ್ಮಠ(Bekkina Kalmath)ದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ.ಧನಂಜಯ ಶ್ರಾವಣ ಚಿಂತನ ಉದ್ಘಾಟಿಸುವರು. ವಿದ್ಯುತ್ ಇಲಾಖೆಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಎಸ್.ಜಿ.ಶಶಿಧರ ಅಧ್ಯಕ್ಷತೆ ವಹಿಸುವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ಪ್ರಧಾನ ಉಪನ್ಯಾಸ ನೀಡುವರು. ಡಿಡಿಪಿಐ ಎಸ್.ಆರ್.ಮಂಜುನಾಥ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಂ.ಆರ್.ಜಯದೇವಪ್ಪ, ಮೆಸ್ಕಾಂನ ಉಪ ಲೆಕ್ಕ ನಿಯಂತ್ರಣಾಧಿಕಾರಿ ಟಿ.ಇ.ಚಂದ್ರಕಲಾ, ಕೆಪಿಟಿಸಿಎಲ್ ನಿವೃತ್ತ ಲೆಕ್ಕಾಧಿಕಾರಿ ಎಸ್.ಪಿ.ಮೋಹನ್‌ಕುಮಾರ್ ಭಾಗವಹಿಸುವರು ಎಂದರು.
ಸೆ.9ರಂದು ಸಂಜೆ 6ಕ್ಕೆ ಶ್ರಾವಣ ಚಿಂತನ-2026ರ ಸಮಾರೋಪ ಸಮಾರಂಭ(Closing ceremony) ನಡೆಯಲಿದ್ದು, ಬೆಕ್ಕಿನ ಕಲ್ಮಠದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಂದಿ-ಹೊದಲೂರು ನೂಲಿಯ ಚಂದಯ್ಯ ಗುರುಪೀಠದ ಶ್ರೀ ವೃಷಭೇಂದ್ರಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ಹೇಳಿದರು. ಪ್ರಮುಖರಾದ ಎಚ್.ಎಂ.ಚಂದ್ರಶೇಖರಯ್ಯ, ರೇಣುಕಾರಾಧ್ಯ, ಕೆ.ಚಂದ್ರಪ್ಪ, ವಿ.ಎಂ.ಮಂಜುನಾಥ್, ಕೊಟ್ರೇಶ್, ನಿರಂಜನಸ್ವಾಮಿ, ಸುನೀಲ್ ಸುದ್ದಿಗೋಷ್ಠಿಯಲ್ಲಿದ್ದರು.