ತೀರ್ಥಹಳ್ಳಿ ತುಂಗಾ ವಿದ್ಯಾವರ್ಧಕ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನೋತ್ಸವ ಆಚರಿಸಲಾಯಿತು. ಎಂ.ಎನ್.ರಮೇಶ್, ಡಾನ್ ರಾಮಣ್ಣ ಶೆಟ್ಟಿ, ಡಾ. ಆರ್.ಕುಮಾರಸ್ವಾಮಿ ಇತರರಿದ್ದರು.
ತೀರ್ಥಹಳ್ಳಿ: ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಸಾಧನೆಯ ಮೂಲಕ ಜೀವನದಲ್ಲಿ ಉನ್ನತ ಸ್ಥಾನ ತಲುಪುವ ಮಾಧ್ಯಮವೂ ಆಗಿದೆ ಎಂದು ತುಂಗಾ ವಿದ್ಯಾವರ್ಧಕ ಸಂದ ಅಧ್ಯ ಎಂ.ಎನ್.ರಮೇಶ್ ಹೇಳಿದರು.
ರಾಷ್ಟ್ರೀಯ ಕ್ರೀಡಾ ದಿನೋತ್ಸವದ ಅಂಗವಾಗಿ ಶನಿವಾರ ತುಂಗಾ ವಿದ್ಯಾವರ್ಧಕ ಕಾಲೇಜಿನ ಕ್ರೀಡಾ ವಿಭಾಗದಿಂದ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆ ಜೀವನದಲ್ಲಿ ಎದುರಾಗುವ ಸೋಲು&ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ದೃಢತೆ ನೀಡುವುದಲ್ಲದೆ ಶಿಸ್ತು, ಸಂಯಮ ಮೂಡಿಸುವ ಮೂಲಕ ಸೌಹಾರ್ದತೆಯನ್ನೂ ಮೂಡಿಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯ ಮಹತ್ವ ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ತುಂಗಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ಪಿಯು ಕಾಲೇಜಿನ ಪ್ರಾಚಾರ್ಯ ಪ್ರಕಾಶ್, ಕ್ರೀಡಾ ನಿರ್ದೇಶಕ ಡಾ. ಸುಜನ್, ಐಕ್ಯೂಎಸಿ ಸಂಚಾಲಕ ಡಾ. ಎಂ.ನಾಗರಾಜ್, ಪ್ರಾಧ್ಯಾಪಕ ಪ್ರಮೋದ್ ಇದ್ದರು. ಕಾರ್ಯಕ್ರಮದಲ್ಲಿ ಕ್ರೀಡಾಪಟು ಡಿ.ಎಂ.ದೀಪ್ತಿ, ಪ್ರಾಧ್ಯಾಪಕಿ ಟಿ.ಆರ್.ಶ್ರೀಕಲಾ ಅವರನ್ನು ಗೌರವಿಸಲಾಯಿತು.