ಸೊರಬ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರಿ ಮಹಾಂತ ಸ್ವಾಮೀಜಿ ಅವರಿಗೆ ಭಕ್ತರು ಗುರುವಂದನೆ ಸಲ್ಲಿಸಿದರು. 
ಶಿವಮೊಗ್ಗ

ಆಧ್ಯಾತ್ಮಿಕ ಶಿಸ್ತು ಗುರುಭಕ್ತಿಯ ಸಂಕೇತ | guru poornime

ಸೊರಬ: ಗುರು ಎಂದರೆ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ನಿವಾರಿಸಿ ಸನ್ಮಾರ್ಗ ತೋರಿಸುವವನು. ಗುರುಭಕ್ತಿ ಎಂದರೆ  ಅವರ ಬೋಧನೆಗಳನ್ನು ಅನುಸರಿಸಿ ಜ್ಞಾನ, ಆಧ್ಯಾತ್ಮಿಕ ಶಿಸ್ತು ಮತ್ತು ಜ್ಞಾನೋದಯದ ಕಡೆಗೆ ಸಾಗುವುದು ಎಂದು ಸೊರಬ ಮರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದ ಚೌಡೇಶ್ವರಿ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ಆಶೀರ್ವಚನ ನೀಡಿದರು.
ಅಂದಿನ ಕಾಲದಲ್ಲಿ ಋಷಿ ಮುನಿಗಳು ಗುರುಪೂರ್ಣಿಮೆಗೆ ಪವಿತ್ರ ಸ್ಥಾನ ನೀಡಿದ್ದರು. ಗುರುವಿಗೆ ವಂದಿಸಿ ಆಶೀರ್ವಾದ ಪಡೆದು ಸನ್ಮಾರ್ಗದಲ್ಲಿ ನಡೆದುಕೊಳ್ಳುವ ಪರಂಪರೆಯನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದೇವೆ. ಗುರು ಭಕ್ತಿಯು ಕೇವಲ ಒಂದು ಆಚರಣೆಯಲ್ಲ. ಅದು ಭಕ್ತಿಯ ಸಂಕೇತ. ಜ್ಞಾನೋದಯದ ಕಡೆಗೆ ಮಾರ್ಗದರ್ಶನ ನೀಡುತ್ತದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ್ ನಾಯ್ಕ, ಟೌನ್ ವೀರಶೈವ ಲಿಂಗಾಯತ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಿಜಗುಣ, ಶಿಮುಲ್ ನಿರ್ದೇಶಕ ದಯಾನಂದ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್, ವೀರಶೈವ ಸಮಾಜದ ಸಂಘಟನ ವೇದಿಕೆ ಅಧ್ಯಕ್ಷ ಪಂಚಾಕ್ಷರಿ ಗೌಡ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್,  ರೇಣುಕಮ್ಮ ಗೌಳಿ, ಜಯಮಾಲಾ, ಡಿ.ಶಿವಯೋಗಿ ಇತರರಿದ್ದರು.