ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮತ್ತಷ್ಟು ವರ್ಷ ಮುಂದುವರಿಯಲಿ ಎಂದು ಪ್ರಾರ್ಥಿಸಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ವಿನೋಬನಗರದ ಶ್ರೀ ಅಭೀಷ್ಟವರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪದ್ಮನಾಭ ಭಟ್ ಇತರರಿದ್ದರು. 
ಶಿವಮೊಗ್ಗ

ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ | Special puja

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ಮಟ್ಟದಲ್ಲಿ ಭಾರತದ ಖ್ಯಾತಿ ವೃದ್ಧಿ
  • ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ
  • ಸುದೀರ್ಘ ಅವಧಿಗೆ ದೇಶದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಪೂಜೆ
ಶಿವಮೊಗ್ಗ: ನರೇಂದ್ರ ಮೋದಿ(Narendra Modi) ಅವರು ಸುದೀರ್ಘ ಅವಧಿಗೆ ಪ್ರಧಾನಿಯಾದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿಯಾಗಿ 4,399 ದಿನ ಆಡಳಿತ ನಡೆಸಿರುವುದು ಹೆಮ್ಮೆಯ ಸಂಗತಿ. ಮೋದಿ ಅವರು ವಿಶ್ವದ ನಾಯಕರಾಗಿ ಗುರುತಿಸಿಕೊಂಡಿದ್ದು, ಮತ್ತಷ್ಟು ಕಾಲ ದೇಶದ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಆಶಿಸಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ(B.Y.Raghavendra) ನೇತೃತ್ವದಲ್ಲಿ ವಿನೋಬನಗರದ ಶ್ರೀ ಅಭೀಷ್ಟವರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ(Special puja) ಸಲ್ಲಿಸಲಾಯಿತು.
ದೇವಸ್ಥಾನದ ಆವರಣ(Temple premises)ದಲ್ಲಿ ಸಸಿ ನೆಡಲಾಯಿತು. ಬಿಜೆಪಿ 7ನೇ ವಾರ್ಡ್ ಅಧ್ಯಕ್ಷ ವಿಶ್ವನಾಥ್, ಸೋಮಸುಂದರ್, ಪದ್ಮನಾಭ ಭಟ್, ಸಿ.ಎಚ್.ಮಾಲತೇಶ್, ರಂಗೇಶ್, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು. ಈ ವೇಳೆ ಪಟಾಕಿ ಸಿಡಿಸಿ ನಂತರ ಸಿಹಿ ಹಂಚಲಾಯಿತು.
ರವೀಂದ್ರನಗರದ ಗಣಪತಿ ದೇವಾಲಯ(Ganapati Temple)ದಲ್ಲಿ ಎಂಎಲ್‌ಸಿ ಡಿ.ಎಸ್.ಅರುಣ್ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಪ್ರಮುಖರು ಪೂಜೆ ಸಲ್ಲಿಸಿದರು. ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎನ್.ಜೆ.ನಾಗರಾಜ್, ದಿನೇಶ್, ಗಣೇಶ್, ಸಂಜಯ್, ಧೂಪ ಗಣೇಶ್, ಸತೀಶ್, ರಮೇಶ್ ಉಪಸ್ಥಿತರಿದ್ದರು.