ಶ್ರಾವಣ ಮೊದಲ ಶುಕ್ರವಾರ ನಿಮಿತ್ತ ಬಿದರೂರು ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಮರಬಿಡಿ ಸೀಮೆಯ ಶ್ರಾವಕ-ಶ್ರಾವಕಿಯರು. 
ಶಿವಮೊಗ್ಗ

ಬಿದರೂರು ಬಸದಿಯಲ್ಲಿ ವಿಶೇಷ ಪೂಜೆ

ಸೋಮಶೇಖರ ಎನ್
ಕಾರ್ಗಲ್: ಬಿದರೂರು ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಶ್ರಾವಣ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ದೇವಿ ಹಾಗೂ ಪದ್ಮಾವತಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಷ್ಟ ವಿಧಾರ್ಚನೆ ಹಾಗೂ ಅಮ್ಮನವರಿಗೆ ಸಹಸ್ರನಾಮ ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ಪೂಜಾ ಕಾರ್ಯಗಳನ್ನು ಬಸದಿ ಪುರೋಹಿತರಾದ ಮೋಹನ್‌ಕುಮಾರ್ ಇಂದ್ರ, ವಿದ್ಯಾಧರ ಇಂದ್ರ, ಪದ್ಮರಾಜ ಇಂದ್ರ, ಆದರ್ಶ ಇಂದ್ರ ಮತ್ತು ಶ್ರೀಧರ ಇಂದ್ರ ನೆರವೇರಿಸಿದರು.
ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್ ನೇಸಲಮನೆ ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು. ಮರಬಿಡಿ ಸೀಮೆಯ ಶ್ರಾವಕ, ಶ್ರಾವಕಿಯರು ಹಾಗೂ ಸಿದ್ಧಯಿನಿ ಮಹಿಳಾ ಸಮಾಜದವರು ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರಾವಣ ಮಾಸದ ಐದು ಶುಕ್ರವಾರ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿದರೂರು ಜೈನ ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್ ನೇಸಲಮನೆ ತಿಳಿಸಿದ್ದಾರೆ.