ಶ್ರೀ ಹುಚ್ಚರಾಯಸ್ವಾಮಿ 
ಶಿವಮೊಗ್ಗ

13ಕ್ಕೆ ಹುಚ್ಚರಾಯಸ್ವಾಮಿಗೆ ವಿಶೇಷ ಅಲಂಕಾರ | Relegious programme

ಶಿಕಾರಿಪುರ: ಅಧಿಕ ಮಾಸದ ಕಡೇ ಶನಿವಾರವಾದ ಜೂ.13ರಂದು ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಗೆ ವಿಶೇಷ ಅಲಂಕಾರ, ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಎಪಿಎಂಸಿ ವರ್ತಕರ ಸಂಘದಿಂದ ಹಮ್ಮಿಕೊಳ್ಳಲಾಗಿದೆ ಎಂದು ವರ್ತಕ ಮಹಾರುದ್ರಪ್ಪ ಹೇಳಿದರು. 
ಕಳೆದ 11 ವರ್ಷಗಳಿಂದ ಶಿಕಾರಿಪುರ ಎಪಿಎಂಸಿ ವರ್ತಕರ ಸಂಘದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಬೆಳಗ್ಗೆ 6.30ರಿಂದ ಸಂಜೆ 5.30ರವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲೋಕಕಲ್ಯಾಣದ ದೃಷ್ಟಿಯಿಂದ ಮತ್ತು ಅಧಿಕ ಮಾಸದ ಕೊನೆಯ ಶನಿವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಕರಿಬಸಪ್ಪ, ಚನ್ನೇಶ್, ಗಜಾನನ, ನಾಗರಾಜ ,ಚಂದ್ರಪ್ಪ, ಲಕ್ಷ್ಮಣ್ ನಾಯ್ಕ, ಕುಮಾರಸ್ವಾಮಿ ಹಿರೇಮಠ, ಸ್ವಾಮಿ, ದಯಾನಂದ, ಪ್ರಭು ಇತರರಿದ್ದರು.